×
Ad

ಬಡವರು ಮತ್ತಷ್ಟು ಬಡವರಾದರು, ಬಿಜೆಪಿ ಸಂಪತ್ತು ಶೇ.550ರಷ್ಟು ಹೆಚ್ಚಾಯಿತು: ಕಾಂಗ್ರೆಸ್ ವಾಗ್ದಾಳಿ

Update: 2022-01-29 11:30 IST

ಹೊಸದಿಲ್ಲಿ: ದೇಶದಲ್ಲಿ ಬಡವರು ಹಾಗೂ  ಮಧ್ಯಮ ವರ್ಗದವರು ಮತ್ತಷ್ಟು ಬಡವರಾಗುತ್ತಿದ್ದರೂ ಬಿಜೆಪಿ ಪಕ್ಷದ ಸಂಪತ್ತು ಶೇಕಡಾ 550 ರಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟಿಸಿದ ಸುರ್ಜೇವಾಲಾ, 2013ನೇ ಸಾಲಿನಲ್ಲಿ ಬಿಜೆಪಿಯ ಸಂಪತ್ತು 780 ಕೋ.ರೂ. ಇತ್ತು. 2019-20ರಲ್ಲಿ ಬಿಜೆಪಿಯ ಸಂಪತ್ತು 4,847 ಕೋ.ರೂ.ಗೆ ಏರಿತು. ದೇಶದ ಬಡವರು ಹಾಗೂ ಮಧ್ಯಮ ವರ್ಗದವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಬಿಜೆಪಿಯ ಸಂಪತ್ತು ಮಾತ್ರ 550 ಶೇ. ಹೆಚ್ಚಳವಾಗಿದೆ.  ‘ಹಮ್ ದೋ ಹಮಾರೆ ದೋ’ ಅವರ ಸಂಪತ್ತು ಲಕ್ಷ ಕೋಟಿಗಳಷ್ಟು ಹೆಚ್ಚಾಯಿತು…

ಇದು "ನವ ಭಾರತ"ದ "ಮೋದಿ ಮಾದರಿ"!

ದೇಶ ನಿಜವಾಗಿಯೂ ಬದಲಾಗುತ್ತಿದೆ ಎಂದು ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News