×
Ad

ಪಂಜಾಬ್ ಚುನಾವಣೆ: ಅಮೃತಸರ ಪೂರ್ವದಿಂದ ನಾಮಪತ್ರ ಸಲ್ಲಿಸಿದ ನವಜೋತ್ ಸಿಂಗ್ ಸಿಧು

Update: 2022-01-29 11:46 IST
Photo: ANI

ಅಮೃತಸರ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಪಕ್ಷದ ಅಮೃತಸರ ಪೂರ್ವ ಅಭ್ಯರ್ಥಿ ನವಜೋತ್ ಸಿಂಗ್ ಸಿಧು ಪಂಜಾಬ್ ವಿಧಾನಸಭಾ ಚುನಾವಣೆಗೆ ಶನಿವಾರ ತನ್ನ ನಾಮಪತ್ರವನ್ನು ಸಲ್ಲಿಸಿದರು ಎಂದು ANI ವರದಿ ಮಾಡಿದೆ.

“ನಾಳೆ ಬೆಳಗ್ಗೆ 11:15ಕ್ಕೆ ನನ್ನ ನಾಮಪತ್ರಗಳನ್ನು ಸಲ್ಲಿಸುತ್ತೇನೆ’’ ಎಂದು ಕಾಂಗ್ರೆಸ್ ನಾಯಕ ಸಿಧು ಶುಕ್ರವಾರ ಟ್ವೀಟಿಸಿದ್ದರು.

ಸಿಧು ಅಮೃತಸರ ಪೂರ್ವದ ಹಾಲಿ ಶಾಸಕರಾಗಿದ್ದು, ಸಿಧು ವಿರುದ್ಧ ಶಿರೋಮಣಿ ಅಕಾಲಿದಳವು ಪಂಜಾಬ್ ನ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾರನ್ನು ಕಣಕ್ಕಿಳಿಸಿದೆ.

ಪಂಜಾಬ್ ನಲ್ಲಿ ಫೆ.20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾ.10ರಂದು ಮತ ಎಣಿಕೆ ನಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News