×
Ad

ಅಖಿಲೇಶ್ ಯಾದವ್-ಜಯಂತ್ ಚೌಧರಿ ಮತ ಎಣಿಕೆಯ ತನಕ ಮಾತ್ರ ಒಟ್ಟಿಗೆ ಇರುತ್ತಾರೆ: ಅಮಿತ್ ಶಾ

Update: 2022-01-29 15:05 IST

ಹೊಸದಿಲ್ಲಿ: ಪಶ್ಚಿಮ ಉತ್ತರಪ್ರದೇಶದ ಮುಝಾಫ್ಫರ್ ನಗರದಲ್ಲಿ ಶನಿವಾರ  ಪ್ರಚಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಅಖಿಲೇಶ್ ಯಾದವ್ ಹಾಗೂ  ಜಯಂತ್ ಚೌಧರಿ ಅವರು ಮತ ಎಣಿಕೆಯವರೆಗೂ ಒಟ್ಟಿಗೆ ಇರುತ್ತಾರೆ. ಒಂದು ವೇಳೆ ಅವರ (ಎಸ್‌ಪಿ) ಸರಕಾರ ರಚನೆಯಾದರೆ, ಆಝಮ್ ಖಾನ್ ಅವರ ಸರಕಾರದಲ್ಲಿ ಕುಳಿತುಕೊಳ್ಳುತ್ತಾರೆ. ಜಯಂತ್ ಭಾಯ್ ಹೊರಗುಳಿಯುತ್ತಾರೆ. ಚುನಾವಣೆಯ ನಂತರ ಏನಾಗುತ್ತದೆ ಎಂಬುದನ್ನು ಅವರ ಅಭ್ಯರ್ಥಿಗಳ ಪಟ್ಟಿ ಹೇಳುತ್ತಿದೆ'' ಎಂದರು.

“ಅಖಿಲೇಶ್ ಬಾಬುಗೆ ನಾಚಿಕೆಯೂ ಇಲ್ಲ. ನಿನ್ನೆ ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಅಖಿಲೇಶ್ ಬಾಬು ಹೇಳಿದ್ದರು. ಇಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ನಮ್ಮ ಅಂಕಿ-ಅಂಶಗಳನ್ನು ಹೇಳಲು ನಾನು  ಬಂದಿದ್ದೇನೆ.  ಧೈರ್ಯವಿದ್ದರೆ. ನಾಳೆ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಆಡಳಿತದ ಅಂಕಿ-ಅಂಶಗಳನ್ನು ಘೋಷಿಸಿ’’ ಎಂದು ಶಾ ಸವಾಲೆಸೆದರು.

ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಶಾ, "ಹಿಂದೆ ಇಲ್ಲಿ ಎಸ್‌ಪಿ-ಬಿಎಸ್‌ಪಿ ಆಡಳಿತ ನಡೆಸಿದ್ದವು. ಬೆಹೆನ್‌ಜಿ (ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ) ಪಕ್ಷ ಬಂದಾಗ ಅವರು ಒಂದು ಜಾತಿಯ ಬಗ್ಗೆ ಮಾತನಾಡುತ್ತಿದ್ದರು.  ಕಾಂಗ್ರೆಸ್ ಪಕ್ಷ ಬಂದಾಗ  ಕುಟುಂಬದ ಬಗ್ಗೆ ಮಾತನಾಡುತ್ತಿತ್ತು ಹಾಗೂ  ಅಖಿಲೇಶ್ ಬಾಬು ಅಧಿಕಾರದಲ್ಲಿದ್ದಾಗ ಅವರು ಗೂಂಡಾಗಳು, ಮಾಫಿಯಾ ಹಾಗೂ  ತುಷ್ಟೀಕರಣದ ಬಗ್ಗೆ ಮಾತನಾಡುತ್ತಿದ್ದರು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News