×
Ad

ಮಟ್ಕಾ ದಂಧೆಗೆ ದಾಳಿ: ನಾಲ್ವರ ಬಂಧನ

Update: 2022-01-29 23:39 IST

ಹಿರಿಯಡ್ಕ, ಜ.29: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.28ರಂದು ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಟ್ಕಾ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಸಂತೆ ಮಾರ್ಕೆಟ್‌ನಲ್ಲಿ ಹಿರಿಯಡ್ಕ ಕೊಪ್ಪಳಮನೆಯ ರಾಘವೇಂದ್ರ ಶೇರಿಗಾರ(40),  ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಕೆಳಪೇಟೆ ರಿಕ್ಷಾ ನಿಲ್ದಾಣದ ಬಳಿ ಸ್ಥಳೀಯ ನಿವಾಸಿ ರಾಮ ಮೊಗವೀರ(46), ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಪೇಟೆಯಲ್ಲಿ ನಂದಳಿಕೆಯ ಯೊಗೀಶ್ ಕಾಳಪ್ಪ ಮಾಬಿಯಾನ್(52) ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಣ್ಸೆಮಕ್ಕಿ ಎಂಬಲ್ಲಿ ಮೊಳಹಳ್ಳಿ ಹೊರನಾಡಿಯ ನರಸಿಂಹ ಕುಲಾಲ್(66) ಎಂಬವರನ್ನು ಬಂಧಿಸಿ, ನಗದು ವಶಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News