ಬಿಗ್ ಬಾಸ್ ಸೀಸನ್-15 ಗೆದ್ದ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್

Update: 2022-01-31 06:23 GMT
Photo: Twitter/Delhitimes

ಮುಂಬೈ: ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಅವರು ನಟ-ರೂಪದರ್ಶಿ ಪ್ರತೀಕ್ ಸೆಹಜ್ಪಾಲ್ ಅವರನ್ನು ಸೋಲಿಸಿ ಬಿಗ್ ಬಾಸ್ ಸೀಸನ್ 15 ನಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ.

'ಸ್ವರಾಗಿಣಿ-ಜೋಡೇನ್ ರಿಶ್ತೋಂ ಕೆ ಸುರ್' ಇದರ ಮೂಲಕ ಜನಪ್ರಿಯರಾಗಿದ್ದ ತೇಜಸ್ವಿ ಪ್ರಕಾಶ್ ಅವರು ಬಿಗ್ ಬಾಸ್ ಟ್ರೋಫಿ ಹಾಗೂ ರೂ. 40 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜೇತರ ಹೆಸರನ್ನು ಕಾರ್ಯಕ್ರಮದ ಹೋಸ್ಟ್ ನಟ ಸಲ್ಮಾನ್ ಖಾನ್ ಘೋಷಿಸಿದರು.

ಸೆಹಜ್ಪಾಲ್ ಅವರು ಮೊದಲ ರನ್ನರ್-ಅಪ್ ಆದರೆ ತೇಜಸ್ವಿ ಪ್ರಕಾಶ್ ಅವರ ಗೆಳೆಯ-ನಟ ಕರಣ್ ಕುಂದ್ರಾ ಮೂರನೇ ಸ್ಥಾನ ಪಡೆದರು. ನಟಿ ಶಮಿತಾ ಶೆಟ್ಟಿ ನಾಲ್ಕನೇ ಸ್ಥಾನ ಪಡೆದರೆ ಕೋರಿಯೋಗ್ರಾಫರ್ ನಿಶಾಂತ್ ಭಟ್ ಅವರು ಅಂತಿಮ ಸುತ್ತಿನಿಂದ ಹಿಂದೆ ಸರಿದು, ಐದನೇ ಸ್ಥಾನ ಪಡೆದು ರೂ 10 ಲಕ್ಷ ಪಡೆದರು.

ಇಪ್ಪತ್ತೆಂಟು ವರ್ಷದ ತೇಜಸ್ವಿ ಪ್ರಕಾಶ್ ಆರಂಭದಿಂದಲೂ ಫೇವರಿಟ್ ಆಗಿದ್ದರಲ್ಲದೆ ಶೋ ನಡೆಯುತ್ತಾ ಸಾಗಿದಂತೆ ಕರಣ್ ಕುಂದ್ರಾ ಅವರ ಪ್ರೇಮಪಾಶದಲ್ಲಿ ಬಿದ್ದಿದ್ದರು. ಕಳೆದ ವರ್ಷದ ಬಿಗ್ ಬಾಸ್ ಒಟಿಟಿ ಇದರ ಅಂತಿಮ ಸುತ್ತಿಗೆ ತಲುಪಿದ್ದ ಈ ಬಾರಿಯ ಮೊದಲ ರನ್ನರ್-ಅಪ್ ಸೆಹಜ್ಪಾಲ್ ಕೂಡ ಬಹಳಷ್ಟು ಜನಪ್ರಿಯರಾಗಿದ್ದರು.

ಅದ್ದೂರಿ ಫೈನಲ್‍ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಚಿತ್ರ ಗೆಹರಿಯಾನ್' ಅನ್ನು ಸಹ ನಟರಾದ ಸಿದ್ಧಾಂತ್ ಚತುರ್ವೇದಿ, ಧೈರ್ಯ ಕರ್ವ ಮತ್ತು ಅನನ್ಯಾ ಪಾಂಡೆ ಜತೆಗೆ ಪ್ರಮೋಟ್ ಮಾಡಿದ್ದರು.

ಬಿಗ್ ಬಾಸ್‍ನ ಈ ಹಿಂದಿನ ಸೀಸನ್ ವಿಜೇತರುಗಳಾದ ಗೌಹಾರ್ ಖಾನ್, ಊರ್ವಶಿ ಧೊಲಕಿಯಾ, ಗೌತಮ್ ಗುಲಾಟಿ, ರುಬೀನಾ ದಿಲೈಕ್ ಮತ್ತು ಶ್ವೇತಾ ತಿವಾರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News