ಶಿಕ್ಷಣ ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Update: 2022-02-01 12:15 IST
ಹೊಸದಿಲ್ಲಿ: ಶಿಕ್ಷಣವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ವೇಳೆ ಮಂಗಳವಾರ ಪ್ರಸ್ತಾಪಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ಪೂರಕ ಶಿಕ್ಷಣವನ್ನು ಒದಗಿಸಲು ವನ್ ಕ್ಲಾಸ್, ವನ್ ಟಿವಿ ಆರಂಭಿಸಲಾಗುವುದು. ಪ್ರಧಾನಿ 'ಇ -ವಿದ್ಯಾ' ಯೋಜನೆಯ ಅಡಿಯಲ್ಲಿ 200 ಚಾನೆಲ್ ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಸಣ್ಣ ಮತ್ತು ಮಧ್ಯಮ ವಲಯದ ಆತಿಥ್ಯ ಸೇವೆಗಳು ಇನ್ನೂ ಪುಟಿದೇಳಬೇಕಿದೆ . ನಾರಿ ಶಕ್ತಿ’ಯ ಮಹತ್ವವನ್ನು ಅರಿತು ಮಹಿಳೆಯರು ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಮೂರು ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.