ಈ ಬಾರಿ ಅತ್ಯಂತ ಸಣ್ಣ ಅವಧಿಯ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್

Update: 2022-02-01 08:57 GMT

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ಭಾಷಣವನ್ನು ಸುಮಾರು 92 ನಿಮಿಷಗಳಲ್ಲಿ ಮುಗಿಸಿದರು.  ಇದು ಅವರ ಈ ತನಕದ ಬಜೆಟ್ ಭಾಷಣದ ಪೈಕಿ  ಅತ್ಯಂತ ಚಿಕ್ಕದ್ದಾಗಿದೆ.

ಕಳೆದ ವರ್ಷ ಅವರು ಒಂದು ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದರು.

2020 ರಲ್ಲಿ ಅವರ ಭಾಷಣವು  ಸುಮಾರು 2 ಗಂಟೆ 40 ನಿಮಿಷಗಳ ಕಾಲ ನಡೆದಿದ್ದು, ಭಾರತದ ಇತಿಹಾಸದಲ್ಲಿ ಸುದೀರ್ಘವಾದದ್ದು ಎಂದು ಬಿಂಬಿತವಾಗಿತ್ತು.

2019 ರ ಬಜೆಟ್ ಮಂಡನೆಯಲ್ಲಿ  ಸೀತಾರಾಮನ್ ಅವರು 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದ್ದರು.  ಮಾಜಿ ಹಣಕಾಸು ಸಚಿವ ಜಸ್ವಂತ್ ಸಿಂಗ್ ಅವರ 2003 ರ 2 ಗಂಟೆ 15 ನಿಮಿಷಗಳ ದಾಖಲೆಯನ್ನು ಮುರಿದಿದ್ದರು.

ಸಾಮಾನ್ಯವಾಗಿ  ಬಜೆಟ್ ಮಂಡನೆಯ ಅವಧಿಯು 90 ರಿಂದ 120 ನಿಮಿಷಗಳವರೆಗೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News