×
Ad

ರಾಷ್ಟ್ರಪತಿ ಭಾಷಣದ ಮುನ್ನ ನೀಟ್ ವಿಷಯದ ಕುರಿತು ತಮಿಳುನಾಡು ಸಂಸದರ ಪ್ರತಿಭಟನೆ

Update: 2022-02-01 21:00 IST
PHOTO : PTI

ಹೊಸದಿಲ್ಲಿ, ಫೆ. 1: ಬಜೆಟ್ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡುವುದಕ್ಕಿಂತ ತುಸು ಮುನ್ನ ನೀಟ್ ಗೆ ಸಂಬಂಧಿಸಿದ ಮಸೂದೆಯನ್ನು ಕೇಂದ್ರಕ್ಕೆ ಕಳುಹಿಸಲು ರಾಜ್ಯಪಾಲರು ವಿಳಂಬಿಸುತ್ತಿರುವುದನ್ನು ವಿರೋಧಿಸಿ ತಮಿಳುನಾಡಿನ ಕಾಂಗ್ರೆಸ್ ಹಾಗೂ ಡಿಎಂಕೆ ಸಂಸದರು ಸೋಮವಾರ ಪ್ರತಿಭಟನೆ ನಡೆಸಿದರು. 

ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎದ್ದು ನಿಲ್ಲುತ್ತಿರುವಂತೆ ತಮಿಳುನಾಡು ಸಂಸದರು ಕೂಡ ಎದ್ದು ನಿಂತರು. ಅಲ್ಲದೆ, ನೀಟ್ ವಿಷಯವನ್ನು ರಾಷ್ಟ್ರಪತಿ ಅವರ ಗಮನಕ್ಕೆ ತರಲು ತಾವು ಬಯಸುವುದಾಗಿ ಹೇಳಿದರು. ಆಸನದಲ್ಲಿ ಕುಳಿತುಕೊಳ್ಳುವಂತೆ ರಾಷ್ಟ್ರಪತಿ ಅವರು ವಿನಂತಿಸಿದರು. ಸಂಸದರು ಕುಳಿತುಕೊಂಡ ಬಳಿಕ ಅವರು ಭಾಷಣ ಮಾಡಿದರು. ಕೇಂದ್ರದ ನೀಟ್ನಿಂದ ರಾಜ್ಯ ಸರಕಾರಕ್ಕೆ ವಿನಾಯತಿ ನೀಡುವಂತೆ ತಮಿಳುನಾಡು ವಿಧಾನ ಸಭೆಯಲ್ಲಿ ಅಂಗೀಕರಿಸಲಾದ ಮಸೂದೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ತಮಿಳುನಾಡು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News