ಮಹಾರಾಷ್ಟ್ರ: 1,000 ಜಿಲೆಟಿನ್ ಸ್ಟಿಕ್‌, 1,000 ಡಿಟೋನೇಟರ್‌ ಗಳ ಜಪ್ತಿ, ಮೂವರ ಬಂಧನ

Update: 2022-02-02 04:31 GMT

ಥಾಣೆ: ಥಾಣೆ ಜಿಲ್ಲೆಯ ಭಿವಂಡಿಯಲ್ಲಿ 1,000 ಜಿಲೆಟಿನ್ ಸ್ಟಿಕ್‌ಗಳು ಹಾಗೂ  ಅಷ್ಟೇ ಸಂಖ್ಯೆಯ ಡಿಟೋನೇಟರ್‌ಗಳೊಂದಿಗೆ ಮೂವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವಿನ ಮೇರೆಗೆ ನಾಡಿ ನಾಕಾದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರನ್ನು ತಡೆದು, ನೆರೆಯ ಪಾಲ್ಘರ್ ಜಿಲ್ಲೆಯ

ವಿಕ್ರಮಗಡ ನಿವಾಸಿಗಳಾದ ಅಲ್ಪೇಶ್ ಅಲಿಯಾಸ್ ಬಲ್ಯ ಹಿರಾಜಿ ಪಾಟೀಲ್ (34), ಪಂಕಜ್ ಅಚ್ಚೇಲಾಲ್ ಚೌಹಾಣ್ (23) ಮತ್ತು ಸಮೀರ್ ಅಲಿಯಾಸ್ ಸಮ್ಯ ರಾಮಚಂದ್ರ ವೇದ್ಗಾ (27) ಅವರಿಂದ ಭಾರೀ ಪ್ರಮಾಣದ ಜಿಲೆಟಿನ್ ಸ್ಟಿಕ್ ಹಾಗೂ ಡಿಟೊನೇಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ  ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರು ಸ್ಫೋಟಕಗಳನ್ನು ಕದ್ದು ಮಾರಾಟ ಮಾಡಲು ಯೋಜಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿಝಾಂಪುರ ಪೊಲೀಸರು ಐಪಿಸಿ ಮತ್ತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News