ಹರ್ಯಾಣದಲ್ಲಿ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಕೋಟಾಕ್ಕೆ ಹೈಕೋರ್ಟ್ ತಡೆ

Update: 2022-02-03 07:49 GMT

ಹೊಸದಿಲ್ಲಿ: ಹರ್ಯಾಣ ಸರಕಾರದ  ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ  ಒದಗಿಸುವ ಪ್ರಕ್ರಿಯೆಗೆ ಪಂಜಾಬ್ ಹಾಗೂ  ಹರ್ಯಾಣ ಹೈಕೋರ್ಟ್ ಗುರುವಾರ  ತಡೆಹಿಡಿದಿದೆ. ನ್ಯಾಯಾಲಯವು  ರಾಜ್ಯ ಸರಕಾರದಿಂದ ಉತ್ತರವನ್ನೂ ಕೇಳಿದೆ.

ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ 2020  ಈ ವರ್ಷದ ಜನವರಿಯಲ್ಲಿ ಜಾರಿಗೆ ಬಂದಿದೆ. ಈ ಕಾಯಿದೆಯು ಗರಿಷ್ಠ ಒಟ್ಟು ಮಾಸಿಕ ವೇತನ ಅಥವಾ ರೂ. 30,000 ವೇತನವನ್ನು ನೀಡುವ ಉದ್ಯೋಗಗಳಿಗೆ ಅನ್ವಯಿಸುತ್ತದೆ.

ಖಾಸಗಿ ವಲಯದ ಕಂಪನಿಗಳು, ಸೊಸೈಟಿಗಳು, ಟ್ರಸ್ಟ್‌ಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು, 10 ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಸಂಬಳ, ವೇತನ ಅಥವಾ ಇತರ ಸಂಭಾವನೆಯಲ್ಲಿ ನೇಮಿಸಿಕೊಳ್ಳುವ ಯಾವುದೇ ವ್ಯಕ್ತಿಗಳಿಗೆ ಈ ಕಾಯ್ದೆ ಅನ್ವಯಿಸುತ್ತದೆ ಎಂದು ರಾಜ್ಯ ಸರಕಾರ ಕಳೆದ ವರ್ಷ ಹೇಳಿತ್ತು

ಈ ಕಾಯ್ದೆಯು ಸಾವಿರಾರು ಯುವಕರಿಗೆ ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News