×
Ad

ಭಾರತದಲ್ಲಿ ತಿಂಗಳ ಬಳಿಕ ಮೊದಲ ಬಾರಿ ಲಕ್ಷಕ್ಕಿಂತ ಕೆಳಗಿಳಿದ ದೈನಿಕ ಕೋವಿಡ್ ಪ್ರಕರಣ

Update: 2022-02-08 07:13 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಮೂರನೇ ಅಲೆ ವ್ಯಾಪಕವಾದ ಬಳಿಕ ಮೊದಲ ಬಾರಿಗೆ ಭಾರತದ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ವರದಿಯಾಗಿದೆ. ಸೋಮವಾರ ದೇಶದಲ್ಲಿ 83876 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇಕಡ 7.25ಕ್ಕೆ ಇಳಿದಿದೆ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 11,08,938 ಆಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕು ಪ್ರಕರಣಗಳ ಶೇಕಡ 2.62ರಷ್ಟಾಗಿದ್ದು, ದೇಶದ ಕೋವಿಡ್-19 ಪುನಶ್ಚೇತನ ದರ ಶೇಕಡ 96.19ಕ್ಕೆ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಏತನ್ಮಧ್ಯೆ ಭಾರತದ ಡ್ರಗ್ ಕಂಟ್ರೋರ್ ಏಕಡೋಸ್‌ನ ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ್ದು, ಇದು ಭಾರತದಲ್ಲಿ ಅನುಮೋದನೆ ಪಡೆದ ಒಂಬತ್ತನೇ ಕೋವಿಡ್-19 ಲಸಿಕೆಯಾಗಿದೆ.

ಅಂತೆಯೇ ರಾಷ್ಟ್ರರಾಜಧಾನಿಯಲ್ಲಿ ಕೋವಿಡ್-19 ತೀವ್ರತೆಯಿಂದಾಗಿ ಡಿಸೆಂಬರ್‌ನಲ್ಲಿ ಮುಚ್ಚಲ್ಪಟ್ಟ ಶಾಲೆಗಳು ಸೋಮವಾರ ಪುನರಾರಂಭವಾಗಿದ್ದು, 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆದವು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹೈಬ್ರೀಡ್ ಬೋಧನೆ ಮತ್ತು ಕಲಿಕಾ ವಿಧಾನದ ಬಗ್ಗೆ ಚರ್ಚೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News