×
Ad

ಮೀಡಿಯಾ ಒನ್ ಪರವಾನಗಿ ರದ್ದತಿ: ಕೇಂದ್ರ ಸರಕಾರದ ನಿರ್ಧಾರ ಎತ್ತಿ ಹಿಡಿದ ಕೇರಳ ಹೈಕೋರ್ಟ್

Update: 2022-02-08 11:03 IST

ಪ್ರಖ್ಯಾತ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ನೀಡಿದ ಪರವಾನಗಿ ರದ್ದು ಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರ ಗೃಹ ಸಚಿವಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ ಬೇಹು ಇಲಾಖೆಗಳಿಂದ ಬಂದಿರುವ ಮಾಹಿತಿಗಳು ಚಾನಲ್ ಗೆ ಸುರಕ್ಷತಾ ಪರವಾನಗಿ ನೀಡದೆ ಇರುವ ಗೃಹ ಸಚಿವಾಲಯದ ನಿರ್ಧಾರವನ್ನು ಸಮರ್ಥಿಸುತ್ತವೆ ಎಂದು ನ್ಯಾ. ಎನ್  ನಗರೇಶ್ ಅವರು ಹೇಳಿದ್ದಾರೆ. 

ಗೃಹ ಸಚಿವಾಲಯದ ಕಡತಗಳನ್ನು ನೋಡಿದಾಗ ಸುರಕ್ಷತಾ ಪರವಾನಗಿ ನೀಡುವ ಬಗ್ಗೆ ಗೃಹ ಇಲಾಖೆ ಬೇಹು ಸಂಸ್ಥೆಗಳಿಂದ ಮಾಹಿತಿ ಕೇಳಿತ್ತು. ಅಲ್ಲಿಂದ ಬಂದಿರುವ ಮಾಹಿತಿಗಳನ್ನು ಗಮನಿಸಿ ಸುರಕ್ಷತಾ ಪರವಾನಗಿ ನೀಡದಂತೆ ಗೃಹ ಇಲಾಖೆಯ ಅಧಿಕಾರಿಗಳ ಸಮಿತಿ ನಿರ್ಧರಿಸಿದೆ. ಅದು ಸಮರ್ಥನೀಯ ಎಂದು ಕಂಡು ಬಂದಿರುವುದರಿಂದ ಚಾನಲ್ ನ ರಿಟ್ ಅರ್ಜಿಯನ್ನು ತಾನು ವಜಾ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News