ಆಸ್ಕರ್ ಗೆ ನಾಮನಿರ್ದೇಶನಗೊಂಡ ದಲಿತ ಪತ್ರಕರ್ತೆಯರ ಕುರಿತ ಸಾಕ್ಷ್ಯಚಿತ್ರ 'ರೈಟಿಂಗ್ ವಿದ್ ಫೈರ್'

Update: 2022-02-09 10:39 GMT

ಹೊಸದಿಲ್ಲಿ: ದಲಿತ ಪತ್ರಕರ್ತೆಯರ ಕುರಿತ ಸಾಕ್ಷ್ಯಚಿತ್ರ 'ರೈಟಿಂಗ್ ವಿದ್ ಫೈರ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಮಂಗಳವಾರ ಘೋಷಿತವಾದ 94ನೇ ಆಸ್ಕರ್ಸ್ ನಾಮಿನೇಶನ್ಸ್‍ನಲ್ಲಿ ಈ ಚಿತ್ರ ನಾಮನಿರ್ದೇಶನಗೊಂಡಿದೆ.

ಈ ಸಾಕ್ಷ್ಯಚಿತ್ರ ರಿಂಟು ಥಾಮಸ್ ಮತ್ತು ಸುಷ್ಮಿತ್ ಘೋಷ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿದೆ. ದಲಿತ ಮಹಿಳೆಯರೇ ನಡೆಸುವ ದೇಶದ ಏಕೈಕ ಪತ್ರಿಕೆಯಾದ ಖಬರ್ ಲಹರಿಯಾ ಕುರಿತ ವಿಚಾರವನ್ನು ಈ ಸಾಕ್ಷ್ಯಚಿತ್ರ ಪ್ರಸ್ತುತ ಪಡಿಸುತ್ತಿದೆ. ಮುಖ್ಯ ವರದಿಗಾರ್ತಿ ಮೀರಾ ಅವರ ನೇತೃತ್ವದಲ್ಲಿ ಈ ಮಹತ್ವಾಕಾಂಕ್ಷಿ ದಲಿತ  ಮಹಿಳೆಯರ ಗುಂಪಿನ ಕಥೆಯನ್ನು ಈ ಸಾಕ್ಷ್ಯ ಚಿತ್ರ ಹೊಂದಿದೆ.

ನಿರ್ದೇಶಕಿ ರಿಂಟು ಥಾಮಸ್ ತಮ್ಮ ಸಾಕ್ಷ್ಯಚಿತ್ರ ಆಸ್ಕರ್ ನಾಮಿನೇಶನ್ಸ್‍ಗೆ ಪ್ರವೇಶ ಪಡೆದಿದ್ದನ್ನು ಸಂತಸದಿಂದ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News