×
Ad

ಮಾಜಿ ಡಬ್ಲ್ಯುಡಬ್ಲ್ಯುಇ ಸ್ಟಾರ್ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

Update: 2022-02-10 13:43 IST
Photo: Twitter/@ANI

ಹೊಸದಿಲ್ಲಿ: ವೃತ್ತಿಪರ ಕುಸ್ತಿಪಟು ಹಾಗೂ  ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯು ಡಬ್ಲ್ಯು ಇ  ) ಸ್ಟಾರ್ ದಿ ಗ್ರೇಟ್ ಖಲಿ ಎಂದು ಪ್ರಸಿದ್ಧರಾಗಿರುವ ದಲಿಪ್ ಸಿಂಗ್ ರಾಣಾ ಅವರು ಇಂದು ಬಿಜೆಪಿ ಸೇರಿದ್ದಾರೆ.  

ಖಲಿ ಅವರು ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಗೆ ಮುಂಜಾನೆ ತಲುಪಿದರು ಮತ್ತು ಮಧ್ಯಾಹ್ನ 1 ಗಂಟೆಗೆ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

 ‘‘ಬಿಜೆಪಿ ಸೇರಿರುವುದು ಖುಷಿ ತಂದಿದೆ. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಕೆಲಸ ಅವರನ್ನು ಸೂಕ್ತ ಪ್ರಧಾನಿಯನ್ನಾಗಿ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಆದುದರಿಂದ, ನಾನು ರಾಷ್ಟ್ರ ಅಭಿವೃದ್ಧಿಗೆ ಆಡಳಿತದ ಒಂದು ಭಾಗ ಯಾಕಾಗಬಾರದು ಎಂದು ಚಿಂತಿಸಿದೆ’’ ಎಂದು ಹೊಸದಿಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಖಲಿ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವ ಹೊಂದಿ ತಾನು ಬಿಜೆಪಿ ಸೇರಿದೆ ಎಂದು ಖಲಿ ತಿಳಿಸಿದ್ದಾರೆ.

49ರ ವಯಸ್ಸಿನ ಗ್ರೇಟ್ ಖಲಿ, ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಆಗಿದ್ದು, ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ 2021 ರ ಪ್ರತಿಷ್ಠಿತ ಡಬ್ಲ್ಯು ಡಬ್ಲ್ಯು ಇ  ಹಾಲ್ ಆಫ್ ಫೇಮ್ ಕ್ಲಾಸ್‌ಗೆ ಸೇರ್ಪಡೆಗೊಂಡಿದ್ದರು.

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಧಿರೈನಾ ಎಂಬ ಸಣ್ಣ ಪಟ್ಟಣದಿಂದ ಬಂದಿರುವ ಖಲಿ, ಡಬ್ಲ್ಯು ಡಬ್ಲ್ಯು ಇ  ನಿಂದ ನಿವೃತ್ತರಾದ ನಂತರ ಭಾರತೀಯ ವೃತ್ತಿಪರ ಕುಸ್ತಿ ಪ್ರಚಾರ ಹಾಗೂ  ತರಬೇತಿ ಅಕಾಡೆಮಿಯಾದ ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಅನ್ನು ತೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News