×
Ad

ಮೇಲ್ಛಾವಣಿ ಕುಸಿತ: ಅವಶೇಷದಡಿ ಹಲವರು ಸಿಲುಕಿರುವ ಶಂಕೆ

Update: 2022-02-10 23:20 IST
Photo: Twitter/@ANI

ಗುರ್‌ಗಾಂವ್‌: ಗುರ್‌ಗಾಂವ್‌ನಲ್ಲಿ ವಸತಿ ಕಟ್ಟಡದ ಮೇಲ್ಛಾವಣಿ ಗುರುವಾರ ರಾತ್ರಿ ಕುಸಿದು ಬಿದ್ದು ಅವಶೇಷದಡಿ ಹಲವಾರು ಮಂದಿ ಸಿಲುಕಿಕೊಂಡಿದ್ದಾರೆಂದು ವರದಿಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಘಟನಾ ಸ್ಥಳಕ್ಕೆ ತಲುಪಿದ್ದು ಕಟ್ಟಡದ ಅಡಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 

"ಆರನೇ ಮಹಡಿಯಿಂದ ಮೊದಲ ಮಹಡಿಯವರೆಗಿನ ಡ್ರಾಯಿಂಗ್ ರೂಮ್ ಪ್ರದೇಶವು ಕುಸಿದಿದೆ. ಇನ್ನೂ ಕೆಲವು ಪ್ರದೇಶವು ಕುಸಿಯುತ್ತಿದೆ" ಎಂದು ಕಟ್ಟಡದ ನಿವಾಸಿ ಕೌಶಲ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ. 

ಕುಸಿದ ಮಹಡಿಯಲ್ಲಿ ಆರು ಫ್ಲಾಟ್‌ಗಳಿದ್ದು, ಅದರಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು ಎಂದು ಕುಮಾರ್ ಹೇಳಿದ್ದಾರೆ. 

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

"ಗುರುಗ್ರಾಮ್‌ನ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್ ಮೇಲ್ಛಾವಣಿ ಕುಸಿದಿದ್ದು, ಆಡಳಿತ ಅಧಿಕಾರಿಗಳು, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಪ್ರತಿಯೊಬ್ಬರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News