ಬಯಲಾಯ್ತು ಭಾರೀ ದೊಡ್ಡ ಬ್ಯಾಂಕ್ ಹಗರಣ !

Update: 2022-02-13 05:05 GMT

ಹೊಸದಿಲ್ಲಿ: ಭಾರತದ ಅತಿದೊಡ್ಡ ಖಾಸಗಿ ವಲಯದ ಶಿಪ್‌ಯಾರ್ಡ್ ಸಂಸ್ಥೆಯಾಗಿರುವ ಬಿಜಿ ಶಿಪ್‌ಯಾರ್ಡ್ ಲಿಮಿಟೆಡ್  28 ಬ್ಯಾಂಕ್‌ಗಳಿಗೆ 22,842 ಕೋಟಿ ರೂಪಾಯಿಗಳ ಮೊತ್ತದ ವಂಚನೆಗಾಗಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮೂಲಕ ದೂರು ದಾಖಲಿಸಲಾಗಿದೆ.

ಹಡಗು ನಿರ್ಮಾಣ ಹಾಗೂ  ದುರಸ್ತಿಯಲ್ಲಿ ತೊಡಗಿರುವ ಸಂಸ್ಥೆಯ ಜೊತೆಗೆ ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಸಿಬಿಐ ತನಿಖೆ ನಡೆಸಲಿರುವ ಅತಿ ದೊಡ್ಡ ಬ್ಯಾಂಕ್ ವಂಚನೆ (ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಒಳಗೊಂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕಿಂತ ದೊಡ್ಡದು) ಪ್ರಕರಣಗಳಲ್ಲಿ ಒಂದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ದೂರಿನ ಮೇರೆಗೆ ದಾಖಲಿಸಲಾದ ಎಫ್‌ಐಆರ್‌ನ ಪ್ರಕಾರ, ಎಪ್ರಿಲ್ 2012 ರಿಂದ ಜುಲೈ 2017 ರವರೆಗೆ ಆರೋಪಿಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಹಣವನ್ನು ಬೇರೊಂದು ಕಡೆ ವಿನಿಯೋಗ, ದುರುಪಯೋಗ ಹಾಗೂ  ಕ್ರಿಮಿನಲ್ ಉಲ್ಲಂಘನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಫೋರೆನ್ಸಿಕ್ ಆಡಿಟ್ ವರದಿ ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News