×
Ad

ಪ್ರಧಾನಿ ಮೋದಿ ರ‍್ಯಾಲಿ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ

Update: 2022-02-13 12:32 IST
ಸಾಂದರ್ಭಿಕ ಚಿತ್ರ (PTI)

ಚಂಡಿಗಡ: ರಾಜ್ಯದಲ್ಲಿ ಫೆಬ್ರವರಿ 14, 16 ಮತ್ತು 17 ರಂದು ಬಹು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ವಿರೋಧಿಸಿ ಪಂಜಾಬ್‌ನ ಸುಮಾರು 23 ರೈತ ಸಂಘಗಳು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬ್ಯಾನರ್ ಅಡಿಯಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ಶನಿವಾರ ತಿಳಿಸಿವೆ.

ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 20 ರಂದು ನಡೆಯಲಿದೆ.

"ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಚುನಾವಣಾ ರ್ಯಾಲಿಗಾಗಿ ಪಂಜಾಬ್‌ಗೆ ಫೆಬ್ರವರಿ 14 ರಂದು ಆಗಮಿಸಿದಾಗ ನಾವು ಪ್ರಧಾನಿ  ಪ್ರತಿಕೃತಿಗಳನ್ನು ಗ್ರಾಮ ಮಟ್ಟದಲ್ಲಿ ದಹಿಸುತ್ತೇವೆ. ರ್ಯಾಲಿಯ ದಿನದಂದು ಅವರ ಭೇಟಿಯನ್ನು ವಿರೋಧಿಸಿ ನೂರಾರು ಹಳ್ಳಿಗಳು ಪ್ರತಿಭಟನೆಗಳನ್ನು ಆಚರಿಸುತ್ತವೆ. ಇದರೊಂದಿಗೆ ಫೆ.16ರಂದು ರಾಜ್ಯಾದ್ಯಂತ ತಹಸಿಲ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’’ ಎಂದು ಎಸ್‌ಕೆಎಂನ ಸಮನ್ವಯ ಸಮಿತಿ ಸದಸ್ಯ ಡಾ.ದರ್ಶನ್ ಪಾಲ್ ತಿಳಿಸಿದ್ದಾರೆ.

"ಪ್ರಧಾನಿ ಫೆಬ್ರವರಿ 14 ರಂದು ಜಲಂಧರ್‌ಗೆ, ಫೆಬ್ರವರಿ 16 ರಂದು ಪಠಾಣ್‌ಕೋಟ್‌ಗೆ ಹಾಗೂ  ಫೆಬ್ರವರಿ 17 ರಂದು ಅಬೋಹರ್‌ಗೆ  ಬರಲಿದ್ದಾರೆ. ನಾವು ಈ ಎಲ್ಲಾ ಜಿಲ್ಲೆಗಳಲ್ಲಿ ರ್ಯಾಲಿ ಸ್ಥಳಗಳಿಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತೇವೆ ಹಾಗೂ  ಅವರಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸುತ್ತೇವೆ" ಎಂದು ಬಿಕೆಯು-ಉಗ್ರಹನ್‌ನ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿಕಲನ್ The Indian Express ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News