"ರಾಜ್ಯದಲ್ಲಿ ಹಕ್ಕಿಜ್ವರ ಹರಡುತ್ತಿದೆ": ಅಧಿಕೃತ ಹೇಳಿಕೆ ನೀಡಿದ ಮಹಾರಾಷ್ಟ್ರ ಸರಕಾರ

Update: 2022-02-17 13:05 GMT

ಮುಂಬೈ: ಥಾಣೆಯ ಕೋಳಿ ಫಾರ್ಮ್ ಒಂದರಲ್ಲಿ ಹಲವು ಕೋಳಿಗಳು ಏವಿಯನ್ ಫ್ಲೂ ಇನ್‍ಫ್ಲೂಯೆನ್ಝಾ ಅಥವಾ ಹಕ್ಕಿಜ್ವರದಿಂದ ಮೃತಪಟ್ಟ ಘಟನೆಯ ನಂತರ ರಾಜ್ಯದಲ್ಲಿ ಹಕ್ಕಿ ಜ್ವರ ಹರಡುತ್ತಿರುವ ಬಗ್ಗೆ ಮಹಾರಾಷ್ಟ್ರ ಸರಕಾರ ಗುರುವಾರ ಅಧಿಕೃತವಾಗಿ ದೃಢಪಡಿಸಿದೆ.

ಥಾಣೆ ಜಿಲ್ಲೆಯ ಶಾಹಪುರ್ ತೆಹ್ಸಿಲ್‍ನ ವೆಲ್ವೇವಲಿ ಎಂಬಲ್ಲಿ  ಸುಮಾರು 200 ಕೋಳಿಗಳಿದ್ದವು. ಅಲ್ಲಿ ಫೆಬ್ರವರಿ 2 ಹಾಗೂ 5ರ್ಯಂದು ಕೆಲ ಕೋಳಿಗಳು ಮೃತಪಟ್ಟಿದ್ದರೂ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಲಾಗಿರಲಿಲ್ಲ ಆದರೆ ಫೆಬ್ರವರಿ 10ರಂದು ಇಲಾಖೆಗೆ ತಿಳಿಸಿದ ಹಿನ್ನೆಲೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಹಕ್ಕಿಜ್ವರ ದೃಢಗೊಂಡಿದೆ.

ಈ ಕೋಳಿ ಫಾರ್ಮ್‍ನ ಒಂದು ಕಿಮೀ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಿಂದ ಕೋಳಿಗಳನ್ನು ಬೇರೆಲ್ಲೂ ಸಾಗಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ನಿಯಮಾನುಸಾರ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನೂ ಹತ್ಯೆಗೈಯ್ಯಲಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News