ಉಮರ್‌ ಖಾಲಿದ್‌ರನ್ನು ಕೈಕೋಳದೊಂದಿಗೆ ಹಾಜರುಪಡಿಸಿದ ದೆಹಲಿ ಪೊಲೀಸ್: ಕೋರ್ಟ್‌ ಆದೇಶ ಮತ್ತೆ ಉಲ್ಲಂಘನೆ

Update: 2022-02-17 14:47 GMT

ಹೊಸದಿಲ್ಲಿ: ಜೆಎನ್‌ಯು ಪ್ರತಿಭಟನೆಯಲ್ಲಿ ದೇಶದ್ರೋಹ ಆರೋಪ ಹೊರಿಸಲ್ಪಟ್ಟ ಮಾಜಿ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ರನ್ನು ದೆಹಲಿ ಪೊಲೀಸರು ಮತ್ತೆ ಕೈಕೋಳಗಳೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವರದಿಗ ತಿಳಿಸಿವೆ. 

ಕೈಕೋಳ ಅಥವಾ ಸಂಕೋಲೆಗಳನ್ನು ಬಳಸದೆ ಎಂದಿನಂತೆ ಉಮರ್‌ ಖಾಲಿದ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಇತ್ತೀಚಿಗೆ  ನ್ಯಾಯಾಲಯ ಆದೇಶ ನೀಡಿದ್ದರೂ ಫೆಬ್ರವರಿ 17 ರಂದು ಅವರನ್ನು ಮತ್ತೆ ಕೈಕೋಳದೊಂದಿಗೆ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೋರ್ಟ್‌ ಆದೇಶವನ್ನು ಉಲ್ಲಂಘಿಸಲಾಗಿದೆ. 
 
2016 ರಿಂದ ಜೆಎನ್‌ಯು ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಪಟಿಯಾಲ ಹೌಸ್ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪಂಕಜ್ ಶರ್ಮಾ ಅವರು ಜನವರಿ 17, 2022 ರಂದು, ಖಾಲಿದ್‌ಗೆ ಕೈಕೋಳ ಅಥವಾ ಸಂಕೋಲೆ ಹಾಕಬಾರದು ಎಂದು ನಿರ್ದಿಷ್ಟ ಆದೇಶವನ್ನು ಜಾರಿಗೊಳಿಸಿದರು. ಬಳಿಕ ಆದೇಶ ಪಾಲನೆಗೆ ಲಾಕಪ್ ಉಸ್ತುವಾರಿ ಮತ್ತು ತಿಹಾರ್ ಸೆಂಟ್ರಲ್ ಜೈಲಿನ ಜೈಲು ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದರು.

ಇದನ್ನೂ ಓದಿ: ಉಮರ್‌ ಖಾಲಿದ್‌ ರನ್ನು ಕೈಕೋಳದೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿಲ್ಲ: ನ್ಯಾಯಾಲಯ

ಈ ಆದೇಶದಲ್ಲಿ, ಚಾಲ್ತಿಯಲ್ಲಿರುವ COVID-19 ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಖಾಲಿದ್‌ನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಬೇಕು ಎಂದು ಸಿಎಂಎಂ ಶರ್ಮಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News