ವ್ಯಾಪಂ ಹಗರಣ:ಇನ್ನೂ 160 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2022-02-19 18:13 GMT
ವ್ಯಾಪಂ ಹಗರಣ

ಭೋಪಾಲ,ಫೆ.19: ಬಹು ಕೋಟಿ ರೂ.ಗಳ ವ್ಯಾಪಂ ಪರೀಕ್ಷೆ ಮತ್ತು ನೇಮಕಾತಿ ಹಗರಣದಲ್ಲಿ 2013ರ ಪೂರ್ವಭಾವಿ ವೈದ್ಯಕೀಯ ಪರೀಕ್ಷೆಯಲ್ಲಿ ಅಕ್ರಮಗಳನ್ನು ನಡೆಸಿದ್ದಕ್ಕಾಗಿ ಮಧ್ಯಪ್ರದೇಶದ ಮೂರು ಮೆಡಿಕಲ್ ಕಾಲೇಜುಗಳ ಅಧ್ಯಕ್ಷರು ಸೇರಿದಂತೆ ಇನ್ನೂ 160 ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರೊಂದಿಗೆ ಈವರೆಗೆ ಹಗರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಆರೋಪಿಗಳ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.

160 ಹೊಸ ಆರೋಪಿಗಳ ವಿರುದ್ಧ ವ್ಯಾಪಂ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಮಧ್ಯಪ್ರದೇಶ ವ್ಯಾವಸಾಯಿಕ ಪರೀಕ್ಷಾ ಮಂಡಳ (ವ್ಯಾಪಂ)ದ ಮಾಜಿ ನಿಯಂತ್ರಣಾಧಿಕಾರಿ ಪಂಕಜ ತ್ರಿವೇದಿ ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳು ಆರೋಪಿಗಳಲ್ಲಿ ಸೇರಿದ್ದಾರೆ ಎಂದು ಸಿಬಿಐನ ವಿಶೇಷ ಅಭಿಯೋಜಕ ಸತೀಶ ದಿನಕರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬುದ್ಧಿವಂತ ವಿದ್ಯಾರ್ಥಿಗಳನ್ನು ತಮ್ಮ ಉತ್ತರ ಪತ್ರಿಕೆಯನ್ನು ಹಿಂದೆ ಕುಳಿತ ಫಲಾನುಭವಿ ವಿದ್ಯಾರ್ಥಿಗಳು ನಕಲು ಮಾಡಲು ಅವಕಾಶವೊದಗಿಸುವಂತೆ ತೊಡಗಿಸಿಕೊಳ್ಳುವ ಮೂಲಕ ಆರೋಪಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ವಂಚನೆ ನಡೆಸಿದ್ದರೆಂದು ಸಿಬಿ ಈ ಹಿಂದೆ ಆರೋಪಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News