9 ವರ್ಷದ ಭಾರತೀಯ ಬಾಲಕ ಜಗತ್ತಿನ ಅತಿ ಕಿರಿಯ ಯೋಗ ತರಬೇತುದಾರ: ಗಿನ್ನಿಸ್‌ ದಾಖಲೆ ಸಾಧನೆ

Update: 2022-02-20 18:07 GMT

ಹೊಸದಿಲ್ಲಿ, ಫೆ. 20: ಭಾರತದ 9 ವರ್ಷದ ಬಾಲಕನೋರ್ವ ಜಗತ್ತಿನ ಅತಿ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರನಾಗುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾನೆ. ‌

ದುಬೈಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ರೆಯಾಂಶು ಸುರಾನಿ ನಾಲ್ಕು ವರ್ಷದವನಿರುವಾಗಲೇ ತನ್ನ ಹೆತ್ತವರೊಂದಿಗೆ ಯೋಗಾಭ್ಯಾಸ ಮಾಡಲು ಆರಂಭಿಸಿದ್ದ. 200 ಗಂಟೆಗಳ ಯೋಗ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ಬಳಿಕ ಆನಂದ್ ಶೇಖರ್ ಯೋಗ ಸ್ಕೂಲ್ನಿಂದ 2021 ಜುಲೈ 27ರಂದು ರೆಯಾಂಶು ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. 

ತನ್ನ ಹೆತ್ತವರು ಋಷಿಕೇಶ್ನಲ್ಲಿ ಯೋಗ ಟೀಚರ್ ಟ್ರೈನಿಂಗ್ ಕೋರ್ಸ್ನಲ್ಲಿ ಹಾಜರಾಗುತ್ತಿದ್ದಾರೆ ಎಂದು ತಿಳಿದಾಗ ರೆಯಾಂಶು ಅರ್ಹ ತರಬೇತುದಾರನಾಗುವ ತನ್ನ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ ಎಂದು ಗಿನ್ನೆಸ್ ವರ್ಲ್ಡ್ ರೆಕಾಡ್ಸ್ನ ವೆಬ್ಸೈಟ್ನ ವರದಿ ಹೇಳಿದೆ. ತಾನು ಒಂದು ಬಾರಿ ಹೆತ್ತವರೊಂದಿಗೆ ಯೋಗಾಭ್ಯಾಸದಲ್ಲಿ ಸೇರಿದೆ. ಅಚ್ಚರಿ ಎಂಬಂತೆ ಯೋಗ ತರಬೇತು ನೀಡುವಲ್ಲಿ ಕೂಡ ಆನಂದ ಕಂಡುಕೊಂಡೆ ಎಂದು ರೆಯಾಂಶು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News