×
Ad

ಏರ್‌ಥಿಂಗ್ಸ್ ಮಾಸ್ಟರ್ಸ್ ಚೆಸ್‌: ಇನ್ನೂ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ ಪ್ರಜ್ಞಾನಂದ

Update: 2022-02-22 12:06 IST

ಹೊಸದಿಲ್ಲಿ: ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಭಾರತದ ಉದಯೋನ್ಮುಖ ಚೆಸ್ ತಾರೆ  ಆರ್. ಪ್ರಜ್ಞಾನಂದ ಅವರು ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನ 10 ಮತ್ತು 12 ರ ಸುತ್ತುಗಳಲ್ಲಿ ಸಹ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆಂಡ್ರೆ ಎಸಿಪೆಂಕೊ ಹಾಗೂ  ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಗೆಲುವು ದಾಖಲಿಸಿದರು.

ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಅದ್ಭುತ ಗೆಲುವಿನ ಒಂದು ದಿನದ ನಂತರ 16 ವರ್ಷ ವಯಸ್ಸಿನ ಪ್ರಜ್ಞಾನಂದ  ಎರಡು ಗೆಲುವುಗಳನ್ನು ದಾಖಲಿಸಿದರು .

ಮಂಗಳವಾರ ಆರಂಭದಲ್ಲಿ ನೊಡಿರ್ಬೆಕ್ ಅಬ್ದುಸಟ್ಟೊರೊವ್ ವಿರುದ್ಧ ಡ್ರಾ ಮಾಡಿಕೊಂಡರು. ಆದಾಗ್ಯೂ, ಅವರು 11 ನೇ ಸುತ್ತಿನಲ್ಲಿ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಇಯಾನ್ ನೆಪೊಮ್ನಿಯಾಚ್ಚಿ ವಿರುದ್ಧ ಸೋತರು. ಅವಳಿ ಗೆಲುವು ಮತ್ತು ಡ್ರಾ ಸಾಧಿಸಿದರೂ ಪ್ರಜ್ಞಾನಂದ 15 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News