"ಜನರಿಗಾಗಿ ಇರುವ ಸರಕಾರವಾದರೆ ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸುವುದಿಲ್ಲ": ಕೇಂದ್ರದ ವಿರುದ್ಧ ವರುಣ್ ಗಾಂಧಿ ಕಿಡಿ
Update: 2022-02-22 14:29 IST
ಹೊಸದಿಲ್ಲಿ: ಬ್ಯಾಂಕುಗಳು ಮತ್ತು ರೈಲ್ವೆಯ ಖಾಸಗೀಕರಣ ಕುರಿತಂತೆ ಸರಕಾರದ ಉದ್ದೇಶದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಸರಕಾರದ ಕ್ರಮ ದೊಡ್ಡ ಮಟ್ಟದ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
"ಕೇವಲ ಬ್ಯಾಂಕುಗಳು ಮತ್ತು ರೈಲ್ವೆಯ ಖಾಸಗೀಕರಣವು 5 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ. ಪ್ರತಿ ಉದ್ಯೋಗ ಕಳೆದುಕೊಳ್ಳುವುದರೊಂದಿಗೆ ಲಕ್ಷಗಟ್ಟಲೆ ಕುಟುಂಬಗಳ ಆಸೆಆಕಾಂಕ್ಷೆಗಳು ಕಮರಿಹೋಗಲಿವೆ. ಜನರ ಕಲ್ಯಾಣಕ್ಕೆ ಶ್ರಮಿಸುವ ಸರಕಾರವೊಂದು ಈ ರೀತಿ ಬಂಡಾಳಶಾಹಿತ್ವವನ್ನು ಉತ್ತೇಜಿಸಿ ಸಮಾಜದಲ್ಲಿ ಅಸಮಾನತೆಯನ್ನು ಪ್ರೋತ್ಸಾಹಿಸುವಂತಿಲ್ಲ" ಎಂದು ಅವರು ಹೇಳಿದರು.
ಬಿಜೆಪಿ ಸಂಸದನಾಗಿದ್ದುಕೊಂಡು ಆಗಾಗ ಕೇಂದ್ರ ಸರಕಾರವನ್ನು ಟೀಕಿಸುತ್ತಲೇ ಬಂದಿರುವ ವರುಣ್ ಗಾಂಧಿ, ಕಳೆದ ವಾರ ಎಬಿಜಿ ಶಿಪ್ ಯಾರ್ಡ್ ಹಗರಣವನ್ನು ದೇಶದ ಅತ್ಯಂತ ದೊಡ್ಡ ಆರ್ಥಿಕ ಹಗರಣವೆಂದು ಬಣ್ಣಿಸಿದ್ದರು.