×
Ad

ಬೆಲೂರಸ್‌ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆಗೆ ಒಪ್ಪಿಕೊಂಡ ಉಕ್ರೇನ್

Update: 2022-02-27 21:05 IST

ಖೈವ್: ರಷ್ಯಾ ಹಾಗೂ ಉಕ್ರೇನ್‌ ಗಡಿಗೆ ಹೊಂದಿಕೊಂಡಿರುವ ಬೆಲರೂಸ್‌ ದೇಶದ ಗಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆಗೆ ತಯಾರಾಗಿದೆ ಎಂದು ಅಂತರಾಷ್ಟ್ರೀಯ ಮೂಲಗಳು ತಿಳಿಸಿದೆ.

ಬೆಲರೂಸ್‌ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ರವಿವಾರ ಒಪ್ಪಿಕೊಂಡಿರುವುದಾಗಿ ಸುದ್ದಿಸಂಸ್ಥೆ ‘ಎಎಫ್‌ಪಿʼವರದಿ ಮಾಡಿದೆ.

ಜಾಗತಿಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದಾಗ್ಯೂ, ಉಕ್ರೇನ್‌ ವಿರುದ್ಧ ಮಿಲಿಟರಿ ದಾಳಿ ನಡೆಸಿದ್ದ ರಷ್ಯಾ ಉಕ್ರೇನ್‌ ಜತೆಗೆ ಬೆಲರೂಸ್‌ನಲ್ಲಿ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ರವಿವಾರ ಬೆಳಿಗ್ಗೆ ತಿಳಿಸಿತ್ತು.

ಆದರೆ, ಬೆಲರೂಸ್‌ನಲ್ಲಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ದೇಶದಲ್ಲಿ ಮಾತುಕತೆ ನಡೆಸಲು ಒಪ್ಪುವುದಾಗಿ ಉಕ್ರೇನ್‌ ಹೇಳಿತ್ತು.

‘ರಷ್ಯಾದೊಂದಿಗೆ ಮಾತುಕತೆಗೆ ಉಕ್ರೇನ್‌ ಸಿದ್ಧವಾಗಿದೆ. ಆದರೆ, ನೆರೆಯ ಬೆಲರೂಸ್‌ನಲ್ಲಿ ಅಲ್ಲ. ಉಕ್ರೇನ್‌ ಮೇಲೆ ಆಕ್ರಮಣ ನಡೆಸಲು ಬೆಲರೂಸ್‌ ಅನ್ನು ರಷ್ಯಾ ಬಳಸಿಕೊಂಡಿದೆ. ಹೀಗಾಗಿ ಬೆಲೂರಸ್‌ನಲ್ಲಿ ಮಾತುಕತೆ ಬೇಡ’ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ತಿಳಿಸಿದ್ದರು.

ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಾಕು ಸೇರಿದಂತೆ ಇತರ ದೇಶಗಳಲ್ಲಿ ಮಾತುಕತೆ ನಡೆಸಲು ಉಕ್ರೇನ್‌ ಪ್ರಸ್ತಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News