ಉಳ್ಳಾಲ ಉರೂಸ್: ದರ್ಗಾಕ್ಕೆ ಮಂಜುನಾಥ್ ಭಂಡಾರಿ ಭೇಟಿ
Update: 2022-02-28 15:13 IST
ಉಳ್ಳಾಲ, ಫೆ.28: ಉಳ್ಳಾಲ ದರ್ಗಾ ಮತ್ತು ನನ್ನ ಸಂಬಂಧ ದಿವಂಗತ ಯು.ಕೆ.ಇಬ್ರಾಹಿಂ ಹಾಜಿಯವರ ಕಾಲದ್ದು. ನಮ್ಮ ಸರಕಾರದಿಂದಾಗ ಬೇಕಾದ ದರ್ಗಾದ ಅಗತ್ಯ ಕಾರ್ಯಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಶಾಸಕನಾಗಿ ನನ್ನ ಪಾಲಿನ ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಿ ಸಹಕರಿಸುವೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಅವರು ಉಳ್ಳಾಲ ದರ್ಗಾ ಹಿನ್ನೆಲೆಯಲ್ಲಿ ದರ್ಗಾಕ್ಕೆ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ವೇಳೆ ಮಂಜುನಾಥ್ ಭಂಡಾರಿಯವರನ್ನು ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಶಾಲು ಸನ್ಮಾನಿಸಿದರು.
ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಅಭಿನಂದನಾ ಭಾಷಣಗೈದರು.
ಈ ವೇಳೆ ಎನ್.ಎಸ್.ಯು.ಐ. ಮಾಜಿ ಅಧ್ಯಕ್ಷ ಮುಹಮ್ಮದ್ ಅಲ್ತಾಫ್, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಸದಸ್ಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್, ಟ್ರಸ್ಟಿ ಯೂಸುಫ್ ಉಳ್ಳಾಲ್ ಉಪಸ್ಥಿತರಿದ್ದರು.