×
Ad

ಆತ್ಮಸ್ಥೈರ್ಯ ಇದ್ದರೆ ಸಾಧನೆ ಸಾಧ್ಯ: ಎಲ್.ಕೆ ಅತೀಕ್

Update: 2022-02-28 16:58 IST

ಕೊಣಾಜೆ :  ಪಿ.ಎಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಪಿ.ಎ ಪ್ರಥಮ ದರ್ಜೆ ಕಾಲೇಜು,ಪಿ.ಎ ಪಾಲಿಟೆಕ್ನಿಕ್, ಪಿ.ಎ ಕಾಲೇಜ್ ಆಫ್ ಫಾರ್ಮಸಿ ಇದರ ಪದವಿ ದಿನಾಚರಣೆ ಕಾರ್ಯಕ್ರಮವು ಪಿ.ಎ. ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿಯಾಗಿ ಆಗಮಿಸಿದ ಕರ್ನಾಟಕ ಸರ್ಕಾರದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಭಾಗ  ಪ್ರಧಾನ ಕಾರ್ಯದರ್ಶಿಗಳಾದ  ಎಲ್.ಕೆ ಅತೀಕ್ (ಐ.ಎ.ಎಸ್) ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ವ ಆಸಕ್ತಿ ಇರಬೇಕು, ತಮ್ಮ ಮೇಲೆ ಸ್ವ ಆತ್ಮಸ್ಥೈರ್ಯ ಇದ್ದರೆ ಎಲ್ಲಿ ಬೇಕಾದರು ಹೋಗಿ ಸಾಧಿಸಬಹುದು ಎಂದರು.

ಪಿ.ಎ. ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಪಿ.ಎ ಝುಬೈರ್ ಇಬ್ರಾಹಿಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶೈಕ್ಷಣಿಕ ಮುಕ್ತಾಯವೆಂಬುದು ಬದುಕಿನ ಆರಂಭ, ನಾಲ್ಕು ಗೋಡೆಯ ನಡುವೆ ಕಲಿತಿದ್ದನ್ನು ಜೀವನಕ್ಕೆ ಅಳವಡಿಸುವ ಮೂಲಕ ಸಮಾಜದ ಏಳಿಗೆಗೆ ಕಾರಣೀಭೂತರಾಗಬೇಕೆಂದರು.

ಪಿ.ಎ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ಲಾ ಇಬ್ರಾಹೀಂ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ರೂಪಿಸಿದ ಶಿಕ್ಷಕರಿಗೆ ಅಭಿನಂದಿಸಿದರು. 

ಶೈಕ್ಷಣಿಕ ಸಾಧಕರು ಮತ್ತು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು ಕಾಲೇಜಿನ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಸಯ್ಯದ್ ಅಮೀನ್ ಅಹಮ್ಮದ್ ರವರು ವಾಚಿಸಿದರು. 

ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ ಹಾಸಿಂ ಸ್ವಾಗತಿಸಿದರು. ಪಿ.ಎ ಕಾಲೇಜ್ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಫ್ರೊ. ಕೆ.ಪಿ ಸೂಫಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ವಂದಿಸಿದರು. ಪಿ.ಎ ಕ್ಯಾಂಪಸ್ ಎ.ಜಿ.ಎಂ ಶರಫುದ್ದೀನ್, ಪಿ.ಎ ಹಣಕಾಸು ನಿರ್ದೇಶಕರಾದ ಅಹ್ಮದ್ ಕುಟ್ಟೀ ಪಿ.ಎ ಕಾಲೇಜ್ ಆಫ್ ಪಾಲಿಟೆಕ್ನಿಕ್ ನ ಉಪ ಪ್ರಾಂಶುಪಾಲರಾದ ಇಸ್ಮಾಯಿಲ್ ಖಾನ್, ಪಿ.ಎ ಕ್ಯಾಂಪಸ್ ಎ.ಜಿ.ಎಂ ಶರಫುದ್ದೀನ್, ಪಿ.ಎ ಹಣಕಾಸು ನಿರ್ದೇಶಕರಾದ ಅಹ್ಮದ್ ಕುಟ್ಟೀ  ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಯಾರೆಲ್ ಆನೆಟ್ ಡಿ.ಸೋಜ ಮತ್ತು ಶಫೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News