ಉಕ್ರೇನ್‌ಗೆ ಮಾನವೀಯ ನೆರವು ರವಾನಿಸಲಿರುವ ಭಾರತ

Update: 2022-02-28 18:57 GMT

ಹೊಸದಿಲ್ಲಿ,ಫೆ.28: ಉಕ್ರೇನ್‌ನ ಕೋರಿಕೆಯ ಮೇರೆಗೆ ಆ ದೇಶಕ್ಕೆ ಔಷಧಿಗಳು ಸೇರಿದಂತೆ ಮಾನವೀಯ ನೆರವನ್ನು ರವಾನಿಸುವುದಾಗಿ ಭಾರತವು ಸೋಮವಾರ ಹೇಳಿದೆ. ತನ್ನ ಐತಿಹಾಸಿಕ ಪಾಲುದಾರ ರಷ್ಯವನ್ನು ಸಿಟ್ಟಿಗೇಳಿಸದೆ ಉಕ್ರೇನ್ ಮತ್ತು ಅದರ ಪಾಶ್ಚಾತ್ಯ ಮಿತ್ರದೇಶಗಳ ಜೊತೆ ತಾನು ನಡೆಸುತ್ತಿರುವ ಮಾತುಕತೆಗಳ ನಡುವೆಯೇ ಭಾರತವು ಈ ನಿರ್ಧಾರವನ್ನು ಕೈಗೊಂಡಿದೆ.

ರಷ್ಯದ ಕಾನೂನುಬಾಹಿರ ಆಕ್ರಮಣದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಉಕ್ರೇನ್ ಸರಕಾರ,ಜನರು ಮತ್ತು ನಿರಾಶ್ರಿತರಿಗೆ ನೆರವಾಗಲು 10 ಮಿಲಿಯನ್ ಡಾಲರ್‌ಗಳನ್ನು ತುರ್ತು ಮಾನವೀಯ ಸಹಾಯದ ರೂಪದಲ್ಲಿ ನೀಡುವುದಾಗಿ ದಕ್ಷಿಣ ಕೊರಿಯ ಸರಕಾರವು ಸೋಮವಾರ ಹೇಳಿದೆ.
ರಷ್ಯದಿಂದ ಪ್ರತ್ಯೇಕಗೊಳ್ಳುವ ನೂತನ ಸಂಕೇತದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ರಷ್ಯ ಅಥವಾ ಬೆಲಾರಸ್‌ಗಳ ಅಥ್ಲೆಟ್‌ಗಳನ್ನು ಆಹ್ವಾನಿಸದಂತೆ ಅಥವಾ ಅವರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡದಂತೆ ಪ್ರಮುಖ ಕ್ರೀಡಾ ಕಾರ್ಯಕ್ರಮಗಳ ಸಂಘಟಕರನ್ನು ತಾನು ಆಗ್ರಹಿಸುವುದಾಗಿ ಸೋಮವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News