×
Ad

ಅಲ್ ತಾಜಿಯ್ಯ ಪದವಿ ಪ್ರದಾನ ಸಮಾರಂಭ

Update: 2022-03-02 14:04 IST

ಆಲಡ್ಕ: ಪಾಣೆಮಂಗಳೂರು ಆಲಡ್ಕದಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಫುಖಹಾ ಮಹಿಳಾ ಶರೀಅತ್ ಕಾಲೇಜ್‌ನಲ್ಲಿ ಮೂರು ವರ್ಷಗಳ ತನಕ ವ್ಯಾಸಂಗ ಮಾಡಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಸನದು ಪ್ರದಾನ ಮಾಡಲಾಯಿತು.ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಡಾ. ಎಂ.ಎಂ ಶರೀಫ್ ಅಧ್ಯಕ್ಷತೆ ವಹಿಸಿದ್ದರು. 

ಅಧ್ಯಕ್ಷ ಭಾಷಣ ಮಾಡಿದ ಅವರು, ಧಾರ್ಮಿಕ ವಿದ್ಯಾಭ್ಯಾಸದ ಮಹತ್ವವನ್ನು ವಿವರಿಸಿದರು. ಬಹಳ ಅಚ್ಚುಕಟ್ಟಾಗಿ ಶಿಷ್ಟಾಚಾರ ವನ್ನು ಮೈಗೂಡಿಸಿಕೊಂಡು ಕಲಿತು ಬಿರುದು ಪಡೆದ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಆಲಡ್ಕ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಕೆ ಐ ಅಶ್ರಫ್ ಸಖಾಫಿ ದುಆ ಮೂಲಕ ಉದ್ಘಾಟಿಸಿದರು.

ಆಲಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಇಂಜಿನಿಯರ್, ಹಾಜಿ ಮುಹಮ್ಮದ್ ರಫೀಕ್ ತೌಫೀಕ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಲ್ ತಾಜಿಯ್ಯ ಬಿರುದು ಪಡೆದ ವಿದ್ಯಾರ್ಥಿನಿಗಳಿಗೆ ಶುಭಹಾರೈಸಿದರು.ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಬುರ್ದಾ ಮಜ್ಲಿಸ್ ಜರುಗಿತು. 

ಮಹಿಳಾ ವಿದ್ವಾಂಸೆ ಬುಶ್ರಾ ಮುಈನಾ ಫಾಳಿಲಾ ರವರು ಮಹಿಳೆಯರ ವಿದ್ಯಾಭ್ಯಾಸದ ಕುರಿತು ಅಧ್ಯಯನ ತರಗತಿ ನಡೆಸಿದರು. ಸಯ್ಯಿದ್ ಹಬೀಬುಲ್ಲಾಹಿ ಪೂಕೋಯ ತಂಙಳ್ ಆಧ್ಯಾತ್ಮಿಕ ಬೋಧನೆ ನೀಡಿ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿದರು.  ಶೈಖುನಾ ಬೊಲ್ಮಾರ್ ಉಸ್ತಾದ್ ಸನದು ದಾನ ನಿರ್ವಹಿಸಿದರು. ಶೈಖುನಾ ಎಸ್ ಎ ಸುಲೈಮಾನ್ ಮುಸ್ಲಿಯಾರ್ ಬೆಳ್ಳಿಯುಂಗುರ ಪ್ರದಾನ ಮಾಡಿದರು. ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಸನದು ದಾನ ಪ್ರಭಾಷಣ ಮಾಡಿದರು. 

ಶೈಖುನಾ ಬೇಕಲ್ ಉಸ್ತಾದ್ ರವರ ಗುರು ಪರಂಪರೆ ʼಅಸ್ಸನದುಲ್ ಮುತ್ತಸಿಲ್ʼ , ʼಅಲ್ ತಾಜಿಯ್ಯ ಪದವಿ ಪ್ರಮಾಣ ಪತ್ರʼ,ಮೂರು ವರ್ಷಗಳ ನಿಗದಿತ ವಿಷಯಗಳ ಅಧ್ಯಯನದ ʼಮಾರ್ಕ್ಸ್ ಪಟ್ಟಿʼ, ʼಅರಬಿಕ್ ಟೀಚರ್ ಟ್ರೈನಿಂಗ್ʼ ಕೋರ್ಸ್ ನ ಸರ್ಟಿಫಿಕೇಟ್ ವಿತರಿಸಲಾಯಿತು. ಶೈಖುನಾ ಅಲ್ ಹಾಜ್ ಎಸ್ ಸುಲೈಮಾನ ಮುಸ್ಲಿಯಾರ್ ದುಆ ಮಾಡುವ ಮೂಲಕ ಶುಭಹಾರೈಸಿದರು. 

ಮದ್ಯಾಹ್ನದ ನಂತರ ನಡೆದ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ರವರ ಅನುಸ್ಮರಣೆ ಸಭೆಯಲ್ಲಿ ಬೇಕಲ್ ಮಜ್ಲಿಸ್ ಇಶಾಅತಿಸ್ಸುನ್ನು ಇದರ ಅಧ್ಯಕ್ಷ  ಎ ಎಮ್ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್ ಅಧ್ಯ್ಯಕ್ಷತೆ ವಹಿಸಿದರು. ಜಿಎಂ ಮುಹಮ್ಮದ್ ಖಾಮಿಲ್ ಸಖಾಫಿ ಉದ್ಘಾಟಿಸಿದರು. ಡಾ. ಮುಹಮ್ಮದ್ ಇಸ್ಮಾಯಿಲ್ ರಶಾದಿ ಅನುಸ್ಮರಣಾ ಭಾಷಣ ಮಾಡಿದರು. ಇಶಾಅತುಸ್ಸುನ್ನ‌ ಪ್ರ.ಕಾರ್ಯದರ್ಶಿ ಎ ಎಮ್ ಇಸ್ಮಾಯಿಲ್ ಸಅದಿ ಉರುಮಣೆ ಸ್ವಾಗತ ಭಾಷಣ ಮಾಡಿದರು.ಕೋಶಾಧಿಕಾರಿ ತೋಟಾಲ್ ಮುಹ್ಯುದ್ದೀನ್ ಸ ಅದಿ ಅಭಿನಂದನಾ ಭಾಷಣ ಮಾಡಿದರು. ಸಭೆಯಲ್ಲಿ ವಿವಿಧ ಗಣ್ಯ ಅತಿಥಿಗಳಿಗೆ ಗೌರವಾರ್ಪಣೆ ನಡೆಸಲಾಯಿತು

ತಾಳಿತ್ತನೂಜಿ ಜಮಾಅತ್ ಅಧ್ಯಕ್ಷ ಟಿ ಯೂಸುಫ್, ಸೂರಿಕುಮೇರು ಜಮಾಅತ್ ಅಧ್ಯಕ್ಷ ಮೂಸಾಕರೀಮ್ ಮಾಣಿ, ಕೆ ಎಚ್ ದಾವೂದ್ ಕಲ್ಲಡ್ಕ, ಅಬ್ದುಲ್ ಮಜೀದ್ ಹಾಜಿ ಆಲಡ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಸಿನಾನ್ ಮಆಲಿ ಬಂಟ್ವಾಳ  ಸ್ವಾಗತಿಸಿದರು. ಅಬ್ದುಲ್ಲತೀಫ್ ಮದನಿ ಕಲ್ಲಡ್ಕ ಕಾರ್ಯಕ್ರಮಗಳನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News