×
Ad

ಉಳ್ಳಾಲ ದರ್ಗಾಕ್ಕೆ ಗಣ್ಯರ ಭೇಟಿ

Update: 2022-03-02 16:48 IST

ಉಳ್ಳಾಲ : ಉಳ್ಳಾಲ ದರ್ಗಾ ಆಡಳಿತ ಸಮಿತಿಯ ನೇತೃತ್ವದಲ್ಲಿ ನಡೆಯುವ  ಪಂಚವಾರ್ಷಿಕ 'ಉಳ್ಳಾಲ ಉರೂಸ್' ಕಾರ್ಯಕ್ರಮಕ್ಕೆ ಉಳ್ಳಾಲ ನಿರ್ಮಲ ಕಾನ್ವೆಂಟ್ ನ ನಿಯೋಗವು ಮದರ್ ಸುಪಿರಿಯರ್ ಅಲ್ಫೋನ್ಸ ನೇತೃತ್ವದಲ್ಲಿ ಆಗಮಿಸಿದರು.

ದರ್ಗಾ ಪ್ರಾರ್ಥನೆಯ ನಂತರ ನಿಯೋಗದಲ್ಲಿದ್ದ ಕ್ರೈಸ್ತ ಕನ್ಯಾ'ಸ್ತ್ರೀ'ಯರನ್ನು ಅಧ್ಯಕ್ಷರ ಕಚೇರಿಯಲ್ಲಿ ದರ್ಗಾ ಪರಂಪರೆಯಂತೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದರ್ಗಾದ ಬಗ್ಗೆ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್  ವಿವರಿಸಿದರು.

ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಚಾರಿಟೇಬಲ್ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ, ದರ್ಗಾ ಆಡಳಿತ ಸಮಿತಿಯ ಹಮೀದ್ ಕೋಡಿ, ಅಬ್ದುಲ್ ಜಬ್ಬಾರ್, ಟ್ರಸ್ಟಿ ಗಳಾದ ಯುಸೂಫ್ ಉಳ್ಳಾಲ್, ಅಹಮದ್ ಬಾವ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ. ಅಬ್ಬಾಸ್, ಕಬೀರ್ ಬುಖಾರಿ ಮುತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News