ಉಕ್ರೇನ್ ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು: ವಿಮಾನ ನಿಲ್ದಾಣದಲ್ಲಿ ಸಂತಸ, ಆನಂದ ಭಾಷ್ಪ
ಹೊಸದಿಲ್ಲಿ, ಮಾ. 4: ಉಕ್ರೇನ್ನಿಂದ ವಿಮಾನದಲ್ಲಿ ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಚಾಹತ್ ಯಾದವ್ ಅವರು ತಮ್ಮ ಕುಟುಂಬವನ್ನು ನೋಡಿದ್ದಾರೆ. ಅವರಿಗೆ ಸಂತೋಷ, ದುಃಖ ಎರಡೂ ಒಮ್ಮೆಲೇ ಉಕ್ಕಿ ಬಂದಿದೆ. ತನ್ನ ಲಗೇಜ್ ಅನ್ನು ಎಸೆದು ಕುಟಂಬದತ್ತ ಧಾವಿಸಿದ್ದಾರೆ, ಅವರನ್ನು ಅಪ್ಪಿಕೊಂಡಿದ್ದಾರೆ ಹಾಗೂ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಉಕ್ರೇನ್ನ ಟೆರ್ನೋಪಿಲ್ ನಗರದಲ್ಲಿ ಎರಡನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ತನ್ನ ಪುತ್ರಿಯನ್ನು ಬರ ಮಾಡಿಕೊಳ್ಳಲು ಅವರ ತಂದೆ ನರೇಂದ್ರ ಕುಮಾರ್ ಹಾಗೂ ಇತರ ಸಂಬಂಧಿಕರು ಬುಧವಾರ ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಭಾರತಕ್ಕೆ ಆಗಮಿಸಿದ ಚಾಹತ್ರನ್ನು ಕಂಡಾಗ ಕುಟುಂಬದ ಸದಸ್ಯರಿಗೆ ತಮ್ಮ ಭಾವನೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಸುತ್ತುವರಿದರು, ಅಪ್ಪಿಕೊಂಡು, ಮುತ್ತಿಟ್ಟರು ಹಾಗೂ ಅತ್ತರು. ಕಳೆದ ಗುರುವಾರ ರಶ್ಯ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್ ತೊರೆಯಲು ಯತ್ನಿಸಿ ವಿಮಾನದಲ್ಲಿ ಪೋಲ್ಯಾಂಡ್ನಿಂದ ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ಬುಧವಾರ ಬಂದಿಳಿದ 200 ವಿದ್ಯಾರ್ಥಿಗಳಲ್ಲಿ ಚಾಹತ್ ಕೂಡ ಒಬ್ಬರು.
ಪುತ್ರಿಯನ್ನು ಕಳೆದುಕೊಳ್ಳುವ ಚಿಂತೆಯಿಂದ ತನಗೆ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ ಎಂದು ಚಾಹತ್ ಅವರು ತಂದೆ ನರೇಂದ್ರ ಕುಮಾರ್ ಹೇಳಿದ್ದಾರೆ. ‘‘ಉಕ್ರೇನ್ ಹಾಗೂ ಯುರೋಪ್ನ ಪ್ರಜೆಗಳಿಗೆ ಮಾತ್ರ ಗಡಿ ದಾಟಲು ಉಕ್ರೇನ್ ಸೇನಾ ಪಡೆ ಅವಕಾಶ ನೀಡುತ್ತಿದೆ’’ ಎಂದು ಚಾಹತ್ ಹೇಳಿದ್ದಾರೆ.
ಆದರೆ, ಭಾರತೀಯರನ್ನು ಯಾಕೆ ತಡೆಯಲಾಗುತ್ತಿದೆ ಹಾಗೂ ನೂಕಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಗಡಿ ದಾಟಲು ಪ್ರಯತ್ನಿಸಿದ ಹಲವು ಭಾರತೀಯರಿಗೆ ಉಕ್ರೇನ್ ಸೇನಾ ಪಡೆ ಥಳಿಸಿದೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಮೇಲೆ ರಶ್ಯ ದಾಳಿ ಸನ್ನಿಹಿತವಾದಾಗ ಚಾಹತ್ ಅವರ ತಂದೆ ಕುಮಾರ್ ಅವರು ಪುತ್ರಿಗೆ ಟಿಕೆಟ್ ಮುಂಗಡ ಕಾಯ್ದಿರಿಸಲು ಪ್ರಯತ್ನಿಸಿದ್ದರು. ಆದರೆ, ಕೆಲವೇ ವಿಮಾನಗಳು ಇರುವುದು ಹಾಗೂ ಟಿಕೇಟ್ಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದು ಅದು ಅಷ್ಟು ಸುಲಭವಾಗಿರಲಿಲ್ಲ.
ಹೊಸದಿಲ್ಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಕುಮಾರ್ ಅವರು ಚಾಹತ್ಗೆ ಫೆಬ್ರವರಿ 20ರಂದು ಆನ್ಲೈನ್ ಮೂಲಕ ವಿಮಾನ ಟಿಕೇಟ್ ಖರೀದಿಸಿದ್ದರು. ಆದರೆ, ವಿಮಾನ ಯಾನ ಸಂಸ್ಥೆ ಟಿಕೆಟ್ ಅನ್ನು ದೃಢಪಡಿಸಿರಲಿಲ್ಲ.
ಅನಂತರ ಅವರು ಖತರ್ ಮೂಲಕ ಭಾರತಕ್ಕೆ ಆಗಮಿಸುವ ವರ್ಗಾವಣೆ ವಿಮಾನಕ್ಕೆ 50 ಸಾವಿರ ರೂಪಾಯಿ ನೀಡಿ ಫೆಬ್ರವರಿ 23ರಂದು ಟಿಕೆಟ್ ಖರೀದಿಸಿದ್ದರು. ಚಾಹತ್ ಅವರು ಕೊರೋನ ವೈರಸ್ ವಿರುದ್ಧ ಎರಡೂ ಲಸಿಕೆ ತೆಗೆದುಕೊಂಡಿದ್ದರು. ಅಲ್ಲದೆ, ಅವರಲ್ಲಿ ಆರ್ಟಿ-ಪಿಸಿಆರ್ ವರದಿ ಕೂಡ ಅವರಲ್ಲಿ ಇತ್ತು. ಆದರೆ ಖತರ್ನಲ್ಲಿ ಅವರಿಗೆ ವಿಮಾನ ಏರಲು ಅವಕಾಶ ನೀಡಲಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ತನ್ನ ಪುತ್ರಿ ಇಂದು ಭಾರತಕ್ಕೆ ಆಗಮಿಸಿದ್ದಾಳೆ. ಅವಳು ಅಂತಿಮವಾಗಿ ಹಿಂದಿರುಗಿದ್ದಾಳೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ನರೇಂದ್ರ ಕುಮಾರ್ ಹೇಳಿದ್ದಾರೆ