×
Ad

ಮೊದಲ ಟೆಸ್ಟ್: ರವೀಂದ್ರ ಜಡೇಜ ಶತಕ, ಬೃಹತ್ ಮೊತ್ತದತ್ತ ಭಾರತ

Update: 2022-03-05 12:48 IST
Photo: AFP

ಮೊಹಾಲಿ: ಆಲ್ ರೌಂಡರ್ ರವೀಂದ್ರ ಜಡೇಜ ಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸುವತ್ತ ಹೆಜ್ಜೆ ಇಟ್ಟಿದೆ.

ಭಾರತ 2ನೇ ದಿನವಾದ ಶನಿವಾರ ಭೋಜನವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿದೆ. ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್ ನಲ್ಲಿ 2ನೇ ಬಾರಿ ಶತಕ(ಔಟಾಗದೆ 102, 166 ಎಸೆತ, 10 ಬೌಂಡರಿ)ಗಳಿಸಿದರು.  ರವಿಚಂದ್ರನ್ ಅಶ್ವಿನ್ 61 ರನ್(82 ಎಸೆತ)ಗಳಿಸಿ ಔಟಾದರು.

ಸುರಂಗ ಲಕ್ಮಲ್(2-86)  ಹಾಗೂ ಲಸಿತ್ ಎಂಬುಲ್ಡೇನಿಯ(2-152) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News