ಪ.ಬಂಗಾಳ:‌ ಕಾನೂನುಬಾಹಿರ ಚಟುವಟಿಕೆಯನ್ನು ತಡೆಯಲು ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ

Update: 2022-03-06 15:26 GMT
photo courtesy:twitter

ಕೋಲ್ಕತಾ,ಮಾ.6: ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಎಂಟು ದಿನಗಳ ಕಾಲ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸರಕಾರವು ಪ್ರಕಟಿಸಿದೆ.

ಅಂತರ್ಜಾಲ ಸಂವಹನ ಮತ್ತು ಅಂತರ್ಜಾಲ ದೂರವಾಣಿ ಧ್ವನಿ ಕರೆಗಳ ಮೂಲದ ಕೆಲವು ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯಬಹುದು ಎಂಬ ಗುಪ್ತಚರ ವರದಿಗಳನ್ನು ಸರಕಾರವು ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಾಲ ಬಳಕೆಯ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ರಾಜ್ಯದ ಗೃಹ ಮತ್ತು ಗುಡ್ಡಗಾಡು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಲ್ಡಾ,ಮುರ್ಷಿದಾಬಾದ್,ಉತ್ತರ ದಿನಾಜ್‌ಪುರ,ಕೂಚ್‌ಬೆಹಾರ್, ಜಲ್ಪಾಯಿಗುರಿ,ಬೀರಭೂಮ್ ಮತ್ತು ದಾರ್ಜಿಲಿಂಗ್ ಜಿಲ್ಲೆಗಳ ಕೆಲವು ಬ್ಲಾಕ್‌ಗಳಲ್ಲಿ ಮಾ.7ರಿಂದ 9,ಮಾ.11,12,15 ಮತ್ತು 16ರಂದು ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 3:15ರವರೆಗೆ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಧ್ವನಿ ಕರೆಗಳು, ಎಸ್ಎಂಎಸ್ ಮತ್ತು ವೃತ್ತಪತ್ರಿಕೆಗಳ ಮೇಲೆ ಯಾವುದೇ ನಿರ್ಬಂಧವನ್ನು ಹೇರಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News