ಈ ರೀತಿಯ ಹಗರಣ ನಡೆದರೆ ಭಾರತದಲ್ಲಿ ಯಾರು ಹೂಡಿಕೆ ಮಾಡುತ್ತಾರೆ?: ಎನ್ ಎಸ್ ಇ ಪ್ರಕರಣದಲ್ಲಿ ನ್ಯಾಯಾಧೀಶರ ಪ್ರಶ್ನೆ
ಹೊಸದಿಲ್ಲಿ: ಮಾಜಿ ಸ್ಟಾಕ್ ಎಕ್ಸ್‌ಚೇಂಜ್ ಮುಖ್ಯಸ್ಥರು ಹಾಗೂ 'ಹಿಮಾಲಯನ್ ಯೋಗಿ' ಭಾಗಿಯಾಗಿರುವ ಷೇರು ಮಾರುಕಟ್ಟೆ ದುರ್ಬಳಕೆ ಪ್ರಕರಣದಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸಿಬಿಐಗೆ ನ್ಯಾಯಾಲಯ ಇಂದು ತಿಳಿಸಿದೆ.
"ದೇಶದ ಪ್ರತಿಷ್ಠೆ ಅಪಾಯದಲ್ಲಿದೆ. ಹಗರಣದ ಕುರಿತು ನಿಮ್ಮ ಸ್ಥೂಲ ಅಂದಾಜು ಏನು?" ಎಂದು ವಿಶೇಷ ನ್ಯಾಯಾಧೀಶರು ಸಿಬಿಐಯನ್ನು ಪ್ರಶ್ನಿಸಿದ್ದಾರೆ.
"ಇಲ್ಲಿ ನಮ್ಮ ವಿಶ್ವಾಸಾರ್ಹತೆ ಅಪಾಯದಲ್ಲಿದೆ. ಈ ರೀತಿಯ ಹಗರಣಗಳು ನಡೆದರೆ ಭಾರತದಲ್ಲಿ ಯಾರು ಹೂಡಿಕೆ ಮಾಡುತ್ತಾರೆ? ಈಗಾಗಲೇ ನಾಲ್ಕು ವರ್ಷಗಳು ಕಳೆದಿದ್ದು ನೀವು ತನಿಖೆಯನ್ನು ಮುಂದುವರಿಸಲು ಸಾಧ್ಯವಿಲ್ಲ, ನೀವು ತನಿಖೆಯನ್ನು ಬೇಗ ಪೂರ್ಣಗೊಳಿಸಬೇಕು" ಎಂದು ನ್ಯಾಯಾಧೀಶರು ಹೇಳಿದರು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ರವಿವಾರದಂದು ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪ್ರಮುಖ ಲೋಪದೋಷಗಳ ಮೇಲೆ ಬಂಧಿಸಲಾಗಿದೆ.