ಅಖಿಲೇಶ್‌ ರ ʼಇವಿಎಂ ಕಳ್ಳತನʼ ವೀಡಿಯೊ ಬಳಿಕ ವಾರಣಾಸಿ ಅಧಿಕಾರಿ ಅಮಾನತು ಸಾಧ್ಯತೆ: ವರದಿ

Update: 2022-03-09 12:05 GMT

ಲಕ್ನೋ: ಉತ್ತರ ಪ್ರದೇಶದಲ್ಲಿ ನಿನ್ನೆ ಭುಗಿಲೆದ್ದ ಇವಿಎಂ ಸಾಗಾಟ ವಿವಾದದ ಬಳಿಕ ವಾರಣಾಸಿಯ ಹಿರಿಯ ಆಡಳಿತ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ndtv.com ವರದಿ ಮಾಡಿದೆ.

 ತರಬೇತಿಗೆ ಬಳಸುವ ಇವಿಎಂಗಳ ಸಾಗಣೆಯಲ್ಲಿ ನಿಯಮಗಳ ಉಲ್ಲಂಘನೆಯಾದ ಆರೋಪದ ಮೇಲೆ ಭಾರತೀಯ ಚುನಾವಣಾ ಆಯೋಗ ಕ್ರಮಕ್ಕೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಪೌರಾಯುಕ್ತರು ಲೋಪ ಎಸಗಿರುವುದನ್ನು ಒಪ್ಪಿಕೊಂಡ ನಂತರ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಅಧಿಕಾರಿ ವಾರಣಾಸಿ ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಧಿಕಾರಿ ಎನ್‌ಕೆ ಸಿಂಗ್ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 ಇವಿಎಂ ಯಂತ್ರಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು  ಅಖಿಲೇಶ್ ಯಾದವ್ ಆರೋಪಿಸಿದ ಒಂದು ದಿನದ ಬೆನ್ನಲ್ಲೇ  ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಇವಿಎಂಗಳ ಸಾಗಾಟದಲ್ಲಿನ ಶಿಷ್ಟಾಚಾರದಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದರು. ಆದಾಗ್ಯೂ, ಸಾಗಾಟ ಮಾಡಿರುವ  ಮತ ಯಂತ್ರಗಳನ್ನು  ತರಬೇತಿ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದರು.

ಇವಿಎಂ ಯಂತ್ರಗಳ ಸಾಗಾಟದ ಶಿಷ್ಟಾಚಾರದಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿರುವ ಅಧಿಕಾರಿಯ ಹೇಳಿಕೆಯ ವೀಡಿಯೊವನ್ನು ಸಮಾಜವಾದಿ ಪಕ್ಷ ಟ್ವೀಟಿಸಿತ್ತು. ಇದರ ಬೆನ್ನಲ್ಲೇ ಇದೀಗ, ವಾರಣಾಸಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News