ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆಂದು 10 ಕೋಟಿ ರೂ. ಮೀಸಲಿಟ್ಟ ಕೇರಳ ಸರ್ಕಾರ
ತಿರುವನಂತಪುರಂ: ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಿರುವ ಕೇರಳ ವಿದ್ಯಾರ್ಥಿಗಳಿಗಾಗಿ 10 ಕೋಟಿ ರೂ.ವನ್ನು ಕೇರಳದ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಶುಕ್ರವಾರ ಘೋಷಿಸಿದ್ದಾರೆ.
ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಯು (NORKA) ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಮತ್ತು ಪ್ರಮಾಣಪತ್ರಗಳನ್ನು ಮರುಪಡೆಯಲು ಸಹಾಯ ಮಾಡಲು ಈ ವಿಶೇಷ ನಿಧಿಯನ್ನು ತೆರೆಯಲಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾದ ನಡೆಯುತ್ತಿರುವ ಮಿಲಿಟರಿ ಆಕ್ರಮಣದಿಂದಾಗಿ ತಮ್ಮ ಕೋರ್ಸ್‌ಗಳನ್ನು ತ್ಯಜಿಸಿ ಮನೆಗೆ ಮರಳಬೇಕಾದ ಉಕ್ರೇನ್‌ನ ವಿವಿಧ ಕಾಲೇಜುಗಳ ಕೇರಳದ ಅನೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗಲಿದೆ.
ಈ ನಡುವೆ, ಕೋವಿಡ್-19 ಅಥವಾ ಯುದ್ಧದಂತಹ ತಮ್ಮ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳಳಿಂದಾಗಿ ಇಂಟರ್ನ್‌ಶಿಪ್ ಅಪೂರ್ಣಗೊಂಡಿರುವ ವಿದೇಶಿ ವೈದ್ಯಕೀಯ ಪದವೀಧರರು ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೇಳಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರ ಈ ವಿದ್ಯಾರ್ಥಿಗಳಿಗಾಗಿ ನಿಧಿ ಘೋಷಿಸಿದೆ.