ಆಸ್ಕರ್ ಪ್ರಶಸ್ತಿ ವಿಜೇತ ಅಮೆರಿಕನ್ ನಟ ವಿಲಿಯಂ ಹರ್ಟ್ ನಿಧನ

Update: 2022-03-14 06:03 GMT
ವಿಲಿಯಂ ಹರ್ಟ್ (Photo: Twitter/@MarvelStudios)

ಲಾಸ್ ಏಂಜಲಿಸ್: ಆಸ್ಕರ್ (Oscar) ಪ್ರಶಸ್ತಿ ವಿಜೇತ ಅಮೆರಿಕಾದ ಹಿರಿಯ ನಟ ವಿಲಿಯಂ ಹರ್ಟ್ (William Hurt) ರವಿವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಅಭಿನಯದ 'ದಿ ಬಿಗ್ ಚಿಲ್ಲ್' ಮತ್ತು 'ಎ ಹಿಸ್ಟರಿ ಆಫ್ ವಾಯ್ಲೆನ್ಸ್' ವ್ಯಾಪಕ ಜನಮನ್ನಣೆಗೆ ಪಾತ್ರವಾಗಿದ್ದವು.

ಹರ್ಟ್ ಅವರು ಮೇ 2018ರಿಂದ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ತಮ್ಮ 72ನೇ ಹುಟ್ಟುಹಬ್ಬಕ್ಕೆ ಇನ್ನೇನು ಒಂದು ವಾರ ಇದೆಯೆನ್ನುವಾಗ ಅವರು ಕೊನೆಯುಸಿರೆಳೆದಿದ್ದಾರೆ.

ವಿಶಿಷ್ಟ ಪಾತ್ರಗಳಲ್ಲಿ ಅಭಿನಯಿಸಲು ಹೆಚ್ಚು ಒಲವು ತೋರಿಸುತ್ತಿದ್ದ ವಿಲಿಯಂ ಹರ್ಟ್ ಅವರು 1983ರಲ್ಲಿ ತೆರೆಕಂಡ ಗೋರ್ಕಿ ಪಾರ್ಕ್ ಚಲನಚಿತ್ರದಲ್ಲಿ ರಷ್ಯನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಹಾಗೂ 1990ರಲ್ಲಿ ತೆರೆ ಕಂಡ ವುಡಿ ಆಲೆನ್ ಅವರು "ಆಲಿಸ್ ಚಿತ್ರದಲ್ಲಿ ಹಾಗೂ 1991ರಲ್ಲಿ ತೆರೆಕಂಡ `ಅಂಟಿಲ್ ದಿ ಎಂಡ್ ಆಫ್ ದಿ ವರ್ಲ್ಡ್' ಚಿತ್ರದಲ್ಲಿ ಅಂಧರಿಗೆ ನೆರವಾಗುವ ಯಂತ್ರ ನಿರ್ಮಿಸುವ ವ್ಯಕ್ತಿಯ ಪಾತ್ರದಲ್ಲಿ ಮಿಂಚಿದ್ದರು.

`ಚಿಲ್ಡ್ರನ್ ಆಫ್ ಎ ಲೆಸ್ಸರ್ ಗಾಡ್' ಚಿತ್ರದಲ್ಲಿ ಕಿವುಡ ವಿದ್ಯಾರ್ಥಿಗಳ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮತ್ತು `ಬ್ರಾಡ್‍ಕಾಸ್ಟ್ ನ್ಯೂಸ್'' ಚಿತ್ರದಲ್ಲಿ ಟಿವಿ ಆ್ಯಂಕರ್ ಆಗಿ ಅದ್ಭುತವಾಗಿ ನಟಿಸಿದ್ದ ವಿಲಿಯಂ ಹರ್ಟ್ ಅವರಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿತ್ತು.

ಡೇವಿಡ್ ಕ್ರೋನೆನ್‍ಬರ್ಗ್ ಅವರ 'ಎ ಹಿಸ್ಟರಿ ಆಫ್ ವಾಯ್ಲೆನ್ಸ್' ಚಿತ್ರದಲ್ಲಿನ ಅವರ ಅಭಿನಯಕ್ಕೂ ಅಕಾಡೆಮಿ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಈ ಚಿತ್ರದಲ್ಲಿ ಅವರು ಕೇವಲ 10 ನಿಮಿಷ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News