12-14 ವಯಸ್ಸಿನವರಿಗೆ ಶೀಘ್ರವೇ ವ್ಯಾಕ್ಸಿನ್, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಲಸಿಕೆ
Update: 2022-03-14 14:26 IST
ಹೊಸದಿಲ್ಲಿ: ಭಾರತವು ತನ್ನ ಕೋವಿಡ್-19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದ್ದು, ಇದರ ಭಾಗವಾಗಿ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಶೀಘ್ರವೇ ಚಾಲನೆ ನೀಡಲಿದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮುನ್ನೆಚ್ಚರಿಕೆ ಡೋಸ್ ಪಡೆಯಲು 60 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಕೂಡ ಅಸ್ವಸ್ಥತೆಯ ಸ್ಥಿತಿಯನ್ನು ತೆಗೆದುಹಾಕಲಾಗಿದೆ. ಆ ವಯಸ್ಸಿನ ವರ್ಗದಲ್ಲಿರುವ ಪ್ರತಿಯೊಬ್ಬರೂ ಈಗ ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳಬಹುದು.