ಎನ್‌ಎಸ್‌ಇ ಮಾಜಿ ಮುಖ್ಯ ಕಾರ್ಯನಿರ್ವಾಹಕಿ ಚಿತ್ರಾ ರಾಮಕೃಷ್ಣರಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2022-03-14 11:57 GMT
Photo:twitter

ಹೊಸದಿಲ್ಲಿ: "ಹಿಮಾಲಯನ್ ಯೋಗಿ" ಎಂದು ಕರೆಸಿಕೊಳ್ಳುವ ವ್ಯಕ್ತಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿರುವುದು ಸೇರಿದಂತೆ ಭಾರತದ ಅತಿದೊಡ್ಡ ಷೇರು ಮಾರುಕಟ್ಟೆಯಲ್ಲಿ ಗಂಭೀರ ಲೋಪಗಳ ಆರೋಪದ ಮೇಲೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಾಹಕಿ  ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ.

ನಾಲ್ಕು ದಿನಗಳ ವಿಚಾರಣೆಯ ನಂತರ ಈ ತಿಂಗಳ ಆರಂಭದಲ್ಲಿ ಚಿತ್ರಾರನ್ನು ಸಿಬಿಐ ಬಂಧಿಸಿತ್ತು.

ಚಿತ್ರಾ ರಾಮಕೃಷ್ಣ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸಿಬಿಐ  ತನ್ನ ಕಸ್ಟಡಿಯನ್ನು ಇನ್ನು ಮುಂದೆ ಕೇಳುವುದಿಲ್ಲ ಎಂದು ಪ್ರತಿಪಾದಿಸಿದ್ದರು.

ಆದರೆ ಸಿಬಿಐ ಇದನ್ನು ವಿರೋಧಿಸಿದ್ದು, ಚಿತ್ರಾ  ಪ್ರಭಾವಿ ವ್ಯಕ್ತಿಯಾಗಿದ್ದು, ಅವರು ವಿದೇಶಿ ಭೇಟಿ ಮತ್ತು ಪ್ರಕರಣದ ಇತರ ಅಂಶಗಳ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದ್ದರಿಂದ ನಾವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕೆಂದು ಬಯಸುತ್ತೇವೆ" ಎಂದು ವಾದಿಸಿತು.

ನ್ಯಾಯಾಲಯವು ಜೈಲು ಕಸ್ಟಡಿಯನ್ನು ಅನುಮೋದಿಸಿತು. ನಂತರ ಮನೆಯ ಆಹಾರ ಹಾಗೂ  ಇತರ ಸೌಕರ್ಯಗಳಿಗಾಗಿ ಚಿತ್ರಾ ಕೋರಿಕೆಯನ್ನು ತಿರಸ್ಕರಿಸಿತು.

"ಎಲ್ಲಾ ಖೈದಿಯೂ ಒಂದೇ. ಅವರು ವಿಐಪಿ ಖೈದಿಯಾಗಲು ಸಾಧ್ಯವಿಲ್ಲ. ನಿಯಮಗಳನ್ನು ಬದಲಾಯಿಸಲಾಗುವುದಿಲ್ಲ" ಎಂದು ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಹೇಳಿದರು. ಜೈಲಿನೊಳಗೆ ವಿಶೇಷ ಸೌಲಭ್ಯಗಳಿಗಾಗಿ ಚಿತ್ರಾ  ವಕೀಲರು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News