×
Ad

ಏರ್ ಇಂಡಿಯಾ ಅಧ್ಯಕ್ಷರಾಗಿ ಎನ್.ಚಂದ್ರಶೇಖರನ್ ನೇಮಕ

Update: 2022-03-14 17:15 IST

ಹೊಸದಿಲ್ಲಿ,ಮಾ.14: ನಟರಾಜನ್ ಚಂದ್ರಶೇಖರನ್ ಅವರು ಏರ್ ಇಂಡಿಯಾದ ಅಧ್ಯಕ್ಷರಾಗಲಿದ್ದಾರೆ ಎಂದು ಟಾಟಾ ಸಮೂಹವು ಸೋಮವಾರ ಪ್ರಕಟಿಸಿದ್ದು,ಅವರ ನೇಮಕಾತಿಯನ್ನು ಆಡಳಿತ ಮಂಡಳಿಯು ದೃಢಪಡಿಸಿದೆ.

ಟಾಟಾ ಸಮೂಹವು ಈ ಮೊದಲು ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಕಾರ್ಯ ನಿರ್ವಾಹಕರನ್ನಾಗಿ ಪ್ರಕಟಿಸಿತ್ತು,ಆದರೆ ಈ ನೇಮಕಾತಿಗೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಕರ್ ಐಸಿ ಏರ್‌ಇಂಡಿಯಾದ ಹುದ್ದೆಯನ್ನು ನಿರಾಕರಿಸಿದ್ದರು.

ಚಂದ್ರಶೇಖರನ್ ಹೋಲ್ಡಿಂಗ್ ಕಂಪನಿ ಮತ್ತು ಟಾಟಾ ನಿರ್ವಹಿಸುತ್ತಿರುವ 100ಕ್ಕೂ ಅಧಿಕ ಕಂಪನಿಗಳ ಪ್ರವರ್ತಕನಾಗಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್,2016ರಲ್ಲಿ ಟಾಟಾ ಸನ್ಸ್‌ನ ಆಡಳಿತ ಮಂಡಳಿಯನ್ನು ಸೇರಿದ್ದ ಅವರು ಜನವರಿ,2017ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರು ಟಾಟಾ ಸ್ಟೀಲ್,ಟಾಟಾ ಮೋಟರ್ಸ್,ಟಾಟಾ ಪವರ್,ಟಿಸಿಎಸ್ ಸೇರಿದಂತೆ ಟಾಟಾ ಸಮೂಹದ ಹಲವಾರು ಕಂಪನಿಗಳ ಅಧ್ಯಕ್ಷರೂ ಆಗಿದ್ದಾರೆ. ಅವರು 2009ರಿಂದ 2017ರವರೆಗೆ ಟಿಸಿಎಸ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆಡಳಿತ ನಿರ್ದೇಶಕರಾಗಿದ್ದರು.

ಚಂದ್ರಶೇಖರ ಟಾಟಾ ಸಮೂಹದ ಅಧ್ಯಕ್ಷರಾಗಿರುವ ಮೊದಲ ಪಾರ್ಸಿಯೇತರ ವ್ಯಕ್ತಿ ಮತ್ತು ವೃತ್ತಿಪರ ಕಾರ್ಯ ನಿರ್ವಾಹಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News