6 ರಿಂದ 12 ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯ: ಗುಜರಾತ್ ಶಿಕ್ಷಣ ಸಚಿವ

Update: 2022-03-17 18:12 GMT
Photo: Twitter/Jitu_vaghani

ಅಹಮದಾಬಾದ್:‌ ಗುಜರಾತ್‌ನಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಜಿತು ವಘಾನಿ ಗುರುವಾರ ಹೇಳಿದ್ದಾರೆ.

ಶಿಕ್ಷಣ ಇಲಾಖೆಗೆ ಬಜೆಟ್‌ ಮೀಸಲಿಡುವ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ವಘಾನಿ, “2022-23ನೇ ಶೈಕ್ಷಣಿಕ ವರ್ಷದಿಂದ ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಶಾಲಾ ಶಿಕ್ಷಣದಲ್ಲಿ ಸೇರಿಸಲು, ಮೊದಲ ಹಂತದಲ್ಲಿ ಭಗವದ್‌ ಗೀತೆಯಲ್ಲಿರುವ ಮೌಲ್ಯಗಳು ಮತ್ತು ತತ್ವಗಳು ಮಕ್ಕಳ ತಿಳುವಳಿಕೆ ಮತ್ತು ಆಸಕ್ತಿಗೆ ಅನುಗುಣವಾಗಿ 6-12ನೇ ತರಗತಿಯಿಂದ ಶಾಲೆಗಳಲ್ಲಿ ಪರಿಚಯಿಸಲಾಗುತ್ತಿದೆ.”

“6 ರಿಂದ 8 ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಕಥೆ ಮತ್ತು ಪಾರಾಯಣ ರೂಪದಲ್ಲಿ ಪರಿಚಯಿಸಬೇಕು, 9 ರಿಂದ 12 ನೇ ತರಗತಿಯಲ್ಲಿ ಭಗವದ್ಗೀತೆಯನ್ನು ಕಥೆ ಮತ್ತು ಪ್ರಥಮ ಭಾಷೆಯ ಪಠ್ಯಪುಸ್ತಕದಲ್ಲಿ ಪಠಣ ರೂಪದಲ್ಲಿ ಪರಿಚಯಿಸಬೇಕು” ಎಂದು ಸಚಿವರು ಹೇಳಿದ್ದಾರೆ.

ಪ್ರಾರ್ಥನಾ ಕಾರ್ಯಕ್ರಮದಲ್ಲಿ 700 ಶ್ಲೋಕಗಳ ಸುದೀರ್ಘ ಹಿಂದೂ ಗ್ರಂಥವನ್ನೂ ಸೇರಿಸಬೇಕು ಎಂದು ಅವರು ಹೇಳಿದ್ದಾರೆ.

“ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಪಠಣವನ್ನು ಸೇರಿಸಬೇಕು. ಭಗವದ್ಗೀತೆ ಆಧಾರಿತ ಶ್ಲೋಕನ್, ಶ್ಲೋಕಪೂರ್ತಿ, ವಕ್ತೃತ್ವ, ನಿಬಂಧ್, ನಾಟ್ಯ, ಚಿತ್ರ, ರಸಪ್ರಶ್ನೆ ಮುಂತಾದ ವಿವಿಧ ಸ್ಪರ್ಧೆಗಳು ಮತ್ತು ಸೃಜನಶೀಲ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆಯೋಜಿಸಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News