×
Ad

ಆಸ್ತಿ ವಿವಾದ: ಮನೆಗೆ ಬೆಂಕಿ ಹಚ್ಚಿ ನಿದ್ದೆಯಲ್ಲಿದ್ದ ಮಗ, ಸೊಸೆ, ಮೊಮ್ಮಕ್ಕಳನ್ನು ಕೊಂದ ವೃದ್ಧ

Update: 2022-03-19 15:19 IST

ಇಡುಕಿ (ಕೇರಳ): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇರಳದ ಇಡುಕಿಯಲ್ಲಿ ವೃದ್ಧನೊಬ್ಬನು  ತಮ್ಮ ಮಗ ಹಾಗೂ  ಕುಟುಂಬದ ಇತರ ಮೂವರನ್ನು ಮನೆಗೆ ಬೆಂಕಿ ಹಚ್ಚಿ ಕೊಂದಿದ್ದಾನೆ. ಇಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯೊಳಗೆ ಮಲಗಿದ್ದ ಆರೋಪಿಯ ಮಗ, ಸೊಸೆ ಹಾಗೂ  ಶಾಲೆಗೆ ಹೋಗುತ್ತಿದ್ದ ಇಬ್ಬರು ಮೊಮ್ಮಗಳು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

79 ವರ್ಷದ ಹಮೀದ್ ಎಂಬಾತ ಮನೆಯಿಂದ ಹೊರಗೆ ಬೀಗ ಹಾಕಿದ ನಂತರ ಕಿಟಕಿಯ ಮೂಲಕ ಪೆಟ್ರೋಲ್ ತುಂಬಿದ್ದ ಸಣ್ಣ ಬಾಟಲಿಗಳನ್ನು ಮನೆಯೊಳಗೆ ಎಸೆದಿದ್ದಾನೆ. ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ. ನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯನ್ನು ಗಮನಿಸಿದ ಕುಟುಂಬದ ಸದಸ್ಯರಲ್ಲಿ ಒಬ್ಬರು ಎಚ್ಚೆತ್ತು ಸಹಾಯಕ್ಕಾಗಿ ಕರೆದರೂ, ನೆರೆಹೊರೆಯವರು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ

ಹಮೀದ್ ಪೆಟ್ರೋಲ್ ತುಂಬಿದ ಬಾಟಲಿಯನ್ನು ಮನೆಗೆ ಎಸೆದಿರುವುದು ಕಂಡುಬಂದಿದೆ ಎಂದು ನೆರೆಹೊರೆಯವರಲ್ಲಿ ಒಬ್ಬರು ಹೇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News