ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
Update: 2022-03-23 10:00 IST
ಹೊಸದಿಲ್ಲಿ: ಸತತ ಎರಡನೇ ದಿನವಾದ ಬುಧವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಲೀಟರ್‌ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದಿಲ್ಲಿಯಲ್ಲಿ ಪೆಟ್ರೋಲ್ ದರವು ಈ 96.21 ರೂ. ನಿಂದ 97.01 ರೂ.ಗೆ ಏರಿಕೆಯಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಮಂಗಳವಾರ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡುವುದರೊಂದಿಗೆ ದರ ಪರಿಷ್ಕರಣೆಯಲ್ಲಿ ದಾಖಲೆಯ 137 ದಿನಗಳ ವಿರಾಮವು ಕೊನೆಗೊಂಡಿತು. ಉತ್ತರ ಪ್ರದೇಶ ಹಾಗೂ ಪಂಜಾಬ್‌ನಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಬೆಲೆಗಳು ಸ್ಥಿರವಾಗಿದ್ದವು. ಈ ಅವಧಿಯಲ್ಲಿ ಕಚ್ಚಾ ವಸ್ತುಗಳ (ಕಚ್ಚಾ ತೈಲ) ಬೆಲೆ ಪ್ರತಿ ಬ್ಯಾರೆಲ್‌ಗೆ 30 ಅಮೆರಿಕನ್ ಡಾಲರ್ ಏರಿಕೆಯಾಗಿತ್ತು.