ಹೀರೋ ಮೋಟೋಕಾರ್ಪ್ ಕಂಪನಿ ಮೇಲೆ ಐಟಿ ದಾಳಿ
Update: 2022-03-23 11:25 IST
ಹೊಸದಿಲ್ಲಿ: ಶಂಕಿತ ತೆರಿಗೆ ವಂಚನೆಗಾಗಿ ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಹಾಗೂ ಕಂಪನಿಯ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ ಹಲವಾರು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸುತ್ತಿದೆ ಎಂದು NDTV ವರದಿ ಮಾಡಿದೆ.
ದೇಶಾದ್ಯಂತ ಸುಮಾರು ಎರಡು ಡಝನ್ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
"ಹೀರೋ ಮೋಟೋ ಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಸೇರಿರುವ ಕಟ್ಟಡದಲ್ಲಿ ಶೋಧ ನಡೆಸಲಾಗುತ್ತಿದೆ. ಹೀರೋ ಮೋಟೋ ಕಾರ್ಪ್‌ನ ಎರಡು ಡಝನ್‌ಗೂ ಹೆಚ್ಚು ಸ್ಥಳಗಳು ಮತ್ತು ಅದರ ಹಿರಿಯ ಅಧಿಕಾರಿಗಳ ಮೇಲೆಯೂ ಶೋಧ ನಡೆಸಲಾಗುತ್ತಿದೆ. ತೆರಿಗೆ ವಂಚನೆ ಶಂಕೆಯ ಮೇಲೆ ಶೋಧ ಜಾಗೀ ವಶಪಡಿಸಿಕೊಳ್ಳುವ ಕ್ರಮ ಕೈಗೊಳ್ಳಲಾಗಿದೆ" ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. .