ಚಲನಚಿತ್ರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ
ಮಣಿಪಾಲ : ರಾಜ್ಯದ ಮೂರು ನಾಲ್ಕು ವಿಶ್ವವಿದ್ಯಾನಿಲಯಗಳನ್ನು ಗುರುತಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನುದಾನವನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಚಲನಚಿತ್ರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಹಾಗೂ ಚಲನಚಿತ್ರ ನಿರ್ದೇಶಕ ಅಶೋಕ್ ಕಶ್ಯಪ್ ಹೇಳಿದ್ದಾರೆ.
ಕರ್ನಾಟಕ ಚಲಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ಇವುಗಳ ಸಹಯೋಗದಲ್ಲಿ ಮಣಿಪಾಲದ ಎಂಐಸಿ ಆಡಿಟೋರಿಯಂನಲ್ಲಿ ಹಮ್ಮಿ ಕೊಳ್ಳಲಾದ ೫ ದಿನಗಳ ಚಲನಚಿತ್ರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕಾರ್ಯಾ ಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಒಂದು ಕಾಲದಲ್ಲಿ ಚಲನಚಿತ್ರ ಇನ್‌ಸ್ಟಿಟ್ಯೂಟ್‌ಗಳಲ್ಲಿ ಸೀಟು ಪಡೆಯಬೇಕಾ ದರೆ ಕ್ಯೂ ನಿಲ್ಲಬೇಕಾಗಿತ್ತು. ಅದಕ್ಕಾಗಿ ಬಹಳ ಸಾಹಸ ಮಾಡಹಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ದೇಶದ ಬಹುತೇಕ ವಿಶ್ವವಿದ್ಯಾನಿಲಯ ಗಳಲ್ಲಿ ಪಿಲ್ಮ್ ಮೇಕಿಂಗ್ ಕೋರ್ಸ್‌ಗಳು ಹರಡಿಕೊಂಡಿವೆ. ಇಂತಹ ವಿವಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಸಣ್ಣ ಸಣ್ಣ ಕಾರ್ಯಾಗಾರಗಳನ್ನು ನಡೆಸಿ ಚಲನಚಿತ್ರ ಪರಿಣತರಿಂದ ತರಬೇತಿ ಕೊಡುವ ಪ್ರಯತ್ನ ಮಾಡಲಾಗು ವುದು ಎಂದರು.
ಅಧ್ಯಕ್ಷತೆಯನ್ನು ಮಣಿಪಾಲ ಎಂಐಸಿ ನಿರ್ದೇಶಕಿ ಡಾ.ಪದ್ಮಾರಾಣಿ ವಹಿಸಿ ದ್ದರು. ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಎಂಐಸಿ ಪ್ರಸಾರ ವಿಭಾಗದ ಮುಖ್ಯಸ್ಥೆ ಡಾ.ಶುಭಾ ಉಪಸ್ಥಿತರಿದ್ದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಶ್ರೀರಾಜ್ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವಿನ್ಯಾಸ್ ಹೆಗ್ಡೆ ಕಾರ್ಯಾಗಾರದ ಕುರಿತು ಮಾತನಾಡಿದರು. ವಿದ್ಯಾರ್ಥಿ ಜಾರ್ಜ್ ಫೆರ್ನಾಂಡಿಸ್ ಸ್ವಾಗತಿಸಿ, ಶ್ರದ್ಧಾ ವಂದಿಸಿದರು. ಗಾಯಾತ್ರಿ ಕಾರ್ಯಕ್ರಮ ನಿರೂಪಿಸಿದರು.