ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆನ್ನಲ್ಲೇ ಈಗ ಸಿಎನ್‌ಜಿ ದರದಲ್ಲೂ ಏರಿಕೆ
Update: 2022-03-24 17:30 IST
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪಿಎನ್‌ಜಿ ಹಾಗೂ ಸಿಎನ್‌ಜಿ ಬೆಲೆ ಏರಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಸಿಎನ್‌ಜಿ ಕೆಜಿಗೆ 58.01 ರುಪಾಯಿಯಿಂದ 59.01 ರುಪಾಯಿಗೆ ಏರಿಕೆಯಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿ. ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದೆ.
ಇದು ಈ ತಿಂಗಳಲ್ಲಿ ಮೂರನೆ ಬಾರಿ ಏರಿಕೆಯಾಗುತ್ತಿದ್ದು, ಜಾಗತಿಕವಾಗಿ ನೈಸರ್ಗಿಕ ಅನಿಲ ದರದಲ್ಲಿ ಏರಿಕೆಯಾಗಿರುವುದರಿಂದ ಕಳೆದ ಎರಡು ಬಾರಿ ಕೆಜಿಗೆ ತಲಾ .50 ಪೈಸೆಯಷ್ಟು ಏರಿಕೆಯಾಗಿತ್ತು. ಈ ವರ್ಷದಲ್ಲಿ ಒಟ್ಟಾರೆ ಕೆಜಿಗೆ 5.50 ರೂಪಾಯಿ ಏರಿಕೆಯಾಗಿದೆ.
ಕಳೆದ ಎರಡು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ 1.60 ಹೆಚ್ಚಳವಾಗಿದ್ದು, ಅಡುಗೆ ಅನಿಲ ಎಲ್‌ಪಿಜಿ ದರಗಳಲ್ಲಿ ಪ್ರತಿ ಸಿಲಿಂಡರ್‌ಗೆ ರೂ 50 ಹೆಚ್ಚಳವಾಗಿದೆ. ಅದರ ಬೆನ್ನಲ್ಲೇ ಸಿಎನ್‌ಜಿ ದರ ಏರಿಕೆಯಾಗಿದೆ.