ಸ್ಥಳೀಯಾಡಳಿತದ ಕಚೇರಿ ಕೆಲಸಗಳಲ್ಲಿ ಮರಾಠಿ ಕಡ್ಡಾಯ: ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಮಸೂದೆ ಅಂಗೀಕಾರ
ಮುಂಬೈ, ಮಾ. 24: ರಾಜ್ಯ ಸರಕಾರದಿಂದ ರೂಪಿಸಲಾದ ಪೌರ ಸಂಸ್ಥೆಗಳು ಹಾಗೂ ನಿಗಮಗಳು ಸೇರಿದಂತೆ ಸ್ಥಳೀಯಾಳಿತದ ಕಚೇರಿ ಕೆಲಸಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಗುರಿ ಹೊಂದಿರುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಗುರುವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮಹಾರಾಷ್ಟ್ರ ಅಧಿಕೃತ ಭಾಷೆ ಕಾಯ್ದೆ-1964 ಸ್ಥಳೀಯಾಡಳಿತ ತಮ್ಮ ಕಚೇರಿ ಕೆಲಸಗಳಲ್ಲಿ ಮರಾಠಿ ಭಾಷೆ ಬಳಸುವುದನ್ನು ಕಡ್ಡಾಯಗೊಳಿಸದ ಕಾರಣ ಮಸೂದೆ ಪರಿಚಯಿಸುವುದು ಅನಿವಾರ್ಯವಾಯಿತು ಎಂದು ರಾಜ್ಯ ಸಚಿವ ಸುಭಾಷ್ ದೇಸಾಯಿ ಅವರು ಹೇಳಿದರು. ಕಾಯಿದೆಯಲ್ಲಿ ನಿಯಮಗಳ ಕೊರತೆಯ ಅನುಕೂಲವನ್ನು ಅಧಿಕಾರಿಗಳು ಬಳಸಿಕೊಂಡ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಇದು ಆ ತಪ್ಪುನ್ನು ಹೋಗಲಾಡಿಸುವ ತಮ್ಮ ಪ್ರಯತ್ನ ಎಂದು ದೇಸಾಯಿ ಹೇಳಿದರು.
‘‘ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಅಥವಾ ನಿಗಮ (ರಾಜ್ಯ ನಡೆಸುತ್ತಿರುವ)ದಿಂದ ಸ್ಥಾಪಿತವಾದ ಯಾವುದೇ ಸ್ಥಳೀಯಾಡಳಿತ ಜನರೊಂದಿಗೆ ಸಂವಹನ ನಡೆಸುವಾಗ ಹಾಗೂ ಆಂತರಿಕ ಕೆಲಸಗಳಲ್ಲಿ ಕೂಡ ಮರಾಠಿಯನ್ನು ಬಳಸಬೇಕು’’ ಎಂದು ಅವರು ಹೇಳಿದ್ದಾರೆ. ವಿದೇಶಿ ರಾಯಭಾರಿಗಳೊದಿಂದಿಗಿನ ಸಂವಹನದಂತಹ ನಿರ್ದಿಷ್ಟ ಸರಕಾರಿ ಕೆಲಸಗಳಲ್ಲಿ ಸ್ಥಳೀಯಾಡಳಿತ ಇಂಗ್ಲೀಷ್ ಅಥವಾ ಹಿಂದಿ ಬಳಸಲು ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಈ ಹಿಂದೆ ಮಸೂದೆ ಬಗ್ಗೆ ಮಾತನಾಡಿದ್ದ ಬಿಜೆಪಿ ಶಾಸಕ ಯೋಗೇಶ್ ಸಾಗರ್, ಚುನಾವಣೆ ಹತ್ತಿರ ಬಂದಾಗ ಮರಾಠಿ ಪ್ರೀತಿ ಹೊರಹೊಮುತ್ತಿದೆ. ಯಾಕೆ?ಎಂದು ಪ್ರಶ್ನಿಸಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ದೇಸಾಯಿ, ಈ ವಿಷಯವನ್ನು ರಾಜಕೀಯದೊಂದಿಗೆ ಸಂಪರ್ಕ ಕಲ್ಪಿಸಬಾರದು ಎಂದಿದ್ದಾರೆ.