ಇನ್ನೆರಡು ದಶಕಗಳಲ್ಲಿ ಭಾರತಕ್ಕೆ 2,500 ಹೊಸ ವಿಮಾನಗಳ ಅಗತ್ಯತೆ ಇದೆ: ಏರ್ ಬಸ್
Update: 2022-03-24 22:14 IST
ಹೈದರಾಬಾದ್, ಮಾ. 24: ಮುಂದಿನ ಎರಡು ದಶಕಗಳಲ್ಲಿ ಭಾರತಕ್ಕೆ 2,210 ಹೊಸ ವಿಮಾನಗಳ ಅಗತ್ಯತೆ ಇದೆ ಎಂದು ಎರ್ ಬಸ್ ನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಈ ವಿಮಾನಗಳಲ್ಲಿ 1,770 ಹೊಸ ಸಣ್ಣ, 440 ಮಧ್ಯಮ ಹಾಗೂ ದೊಡ್ಡ ವಿಮಾನಗಳನ್ನು ಹೊಂದಿರಲಿವೆ ಎಂದು ಏರ್ಲೈನ್ ಮಾರ್ಕೆಟಿಂಗ್ ಇಂಡಿಯಾ ಆ್ಯಂಡ್ ಸೌತ್ ಏಷಿಯಾ, ಏರ್‌ಬಸ್ ನ ಬ್ರೆಂಟ್ ಮೆಕ್ಬ್ರೆಟ್ನಿ ತಿಳಿಸಿದ್ದಾರೆ. 2040ರಲ್ಲಿ ಭಾರತಕ್ಕೆ 34,000 ಹೆಚ್ಚುವರಿ ಪೈಲಟ್ಗಳು ಹಾಗೂ 45,000 ಟೆಕ್ನೀಷಿಯನ್ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ಮುಂದಿನ ಎರಡು ದಶಕಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 6.2 ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಅವರು ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ತಿಳಿಸಿದರು.