×
Ad

ಐಪಿಎಲ್: ಚೆನ್ನೈ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಶುಭಾರಂಭ

Update: 2022-03-26 23:05 IST

 ಮುಂಬೈ, ಮಾ.26: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಕೋಲ್ಕತಾ ನೈಟ್ ರೈಡರ್ಸ್ 15ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

  ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಗೆಲ್ಲಲು 132 ರನ್ ಗುರಿ ಪಡೆದ ಕೆಕೆಆರ್ 18.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಿತು.

ವೆಂಕಟೇಶ್ ಅಯ್ಯರ್(16 ರನ್)ಜೊತೆಗೆ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ(44 ರನ್,34 ಎಸೆತ, 6 ಬೌಂಡರಿ,1 ಸಿಕ್ಸರ್)ಮೊದಲ ವಿಕೆಟ್‌ನಲ್ಲಿ 43 ರನ್ ಸೇರಿಸಿದರು. ಅಯ್ಯರ್ ಔಟಾದ ಬಳಿಕ ನಿತೀಶ್ ರಾಣಾ(21)ಹಾಗೂ ರಹಾನೆ 2ನೇ ವಿಕೆಟ್‌ಗೆ 33 ರನ್ ಜೊತೆಯಾಟ ನಡೆಸಿದರು. ನಾಯಕ ಶ್ರೇಯಸ್ ಅಯ್ಯರ್(ಔಟಾಗದೆ 20) ಹಾಗೂ ಸ್ಯಾಮ್ ಬಿಲ್ಲಿಂಗ್ಸ್(25,21 ಎಸೆತ) ಗೆಲುವಿನ ವಿಧಿವಿಧಾನ ಪೂರೈಸಿದರು. ಚೆನ್ನೈ ಬೌಲಿಂಗ್‌ನಲ್ಲಿ ಬ್ರಾವೊ(3-20) ಮೂರು ವಿಕೆಟ್‌ಗಳನ್ನು ಪಡೆದರು.

 ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡವು ಮಾಜಿ ನಾಯಕ ಎಂ.ಎಸ್. ಧೋನಿ ಸಿಡಿಸಿರುವ ಅರ್ಧಶತಕದ ನೆರವಿನಿಂದ ಕೋಲ್ಕತಾ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News