ಏಕಕಾಲದಲ್ಲಿ ʼKGF-2ʼ, ವಿಜಯ್‌ ಅಭಿನಯದ ʼಬೀಸ್ಟ್‌ʼ: ಈ ಬಗ್ಗೆ ನಟ ಯಶ್‌ ಹೇಳಿದ್ದೇನು ಗೊತ್ತೇ?

Update: 2022-03-30 05:37 GMT
 ಕೆಜಿಎಫ್ -2 ಚಿತ್ರದ ಪೋಸ್ಟರ್ 

ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ -2 ಚಿತ್ರದ  ಟ್ರೈಲರ್  ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಕನ್ನಡ, ತೆಲುಗು,  ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಹೊರ ಬಂದಿದೆ. 

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ -2 ಚಿತ್ರ  ಎಪ್ರಿಲ್ 14ಕ್ಕೆ ಬಿಡುಗಡೆಯಾಗಲಿದ್ದು, ರವಿವಾರ ಬಿಡುಗಡೆಗೊಂಡ ಟ್ರೈಲರ್ ಇದೀಗ ಐದೂ ಭಾಷೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪೆಡೆದಿದೆ. 

ಕೆಜಿಎಫ್ -1 ಚಿತ್ರದಲ್ಲಿ ಪತ್ರಕರ್ತನಾಗಿ ಅನಂತ್ ಅವರು ನಾಗ್ ಇದ್ದರೆ ಕೆಜಿಎಫ್ -2 ಚಿತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. 

‘ನಾವು ತುಂಬ ಮುಂಚೆಯೇ ಸಿನೆಮಾ ಬಿಡುಗಡೆಗೆ ದಿನಾಂಕ​ ಘೋಷಣೆ​ ಮಾಡಿದ್ದೇವೆ. ಯಾವ ಸಿನೆಮಾ ಅದೇ ದಿನಾಂಕಕ್ಕೆ ಬಿಡುಗಡೆಯಾಗಲಿದೆ ಎಂಬ ಬಗ್ಗೆ​ ತಿಳಿದಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದ್ದು,  ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಹೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎಂದು ಹೇಳಬೇಕು. ಎರಡೂ ಕೂಡ ಇಂಡಿಯನ್​ ಸಿನೆಮಾ. ಇದು ಚುನಾವಣೆ​ ಅಲ್ಲ, ಸಿನೆಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನೆಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಹಿರಿಯರು​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನೆಮಾ ಇಷ್ಟ ಆಗಲಿದೆ’ ಎಂದು ನಟ ಯಶ್​ ರವಿವಾರ ಈ ಕುರಿತು  ಟ್ರೈಲರ್ ಬಿಡುಗಡೆ ಬಳಿಕ ಪ್ರತಿಕ್ರಿಯಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News