ಉಡುಪಿ: ಕೇಂದ್ರ ಸರಕಾರದ ಖಾಸಗೀಕರಣ ವಿರುದ್ಧ ಅಂಚೆ ನೌಕರರ ಆಕ್ರೋಶ

Update: 2022-03-28 14:53 GMT

ಉಡುಪಿ : ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವ ಕುರಿತು ಅವೈಜ್ಞಾನಿಕ ಗುರಿಯನ್ನು ನೀಡಲಾಗುತ್ತಿದೆ. ಈ ಮೂಲಕ ನೌಕರರ ಮೇಲೆ ಬ್ರಿಟೀಷರ ರೀತಿಯ ದಬ್ಬಾಳಿಕೆ, ದೌರ್ಜನ್ಯ ನಡೆಸಲಾಗುತ್ತಿದೆ. ಇಲ್ಲಿ ಈಗಲೂ   ಬ್ರೀಟಿಷ್ ರೂಲ್ ನಡೆಯುತ್ತಿದೆ ಎಂದು ಪೋಸ್ಟಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಇದರ ಉಡುಪಿ ವಿಭಾಗದ ಅಧ್ಯಕ್ಷ ಅಂಚೆ ನೌಕರರ ಸಂಘಟನೆ ಗಳ ಜಂಟಿ ಕ್ರಿಯಾ ಸಮಿತಿಯ ಉಡುಪಿ ವಿಭಾಗದ ಅಧ್ಯಕ್ಷ ಪ್ರವೀಣ್ ಜತ್ತನ್ನ ಆರೋಪಿಸಿದ್ದಾರೆ.

ಎರಡು ದಿನಗಳ ರಾಷ್ಟ್ರ ವ್ಯಾಪಿ ಮುಷ್ಕರದ ಪ್ರಯುಕ್ತ ಅಂಚೆ ನೌಕರರ ಸಂಘಟನೆ ಗಳ ಜಂಟಿ ಕ್ರಿಯಾ ಸಮಿತಿಯ ಉಡುಪಿ ವಿಭಾಗದ ನೇತೃತ್ವದಲ್ಲಿ ಉಡುಪಿ ಮುಖ್ಯ ಅಂಚೆ ಕಚೇರಿ ಎದುರು ಸೋಮವಾರ ನಡೆದ ಧರಣಿಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಮುಷ್ಕರದ ಮೂಲಕ ಇಲಾಖೆಯಿಂದ 23 ಬೇಡಿಕೆಗಳನ್ನು ಸರಕಾರದ ಮುಂದಿರಸಲಾಗಿದೆ. ಇದೆಲ್ಲ ಸಿಗಬೇಕಾದರೆ ಮೊದಲು ಖಾಸಗೀಕರಣ ಆಗು ವುದನ್ನು ತಡೆಯಬೇಕಾಗಿದೆ. ಕೇಂದ್ರ ಸರಕಾರ ೧೫೮ ವರ್ಷ ಇತಿಹಾಸವುಳ್ಳ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಅಂಚೆ ಇಲಾಖೆಯಿಂದ ಯಾವುದೇ ಲಾಭ ಇಲ್ಲ ಎಂಬುದು ಸರಕಾರದ ವಾದ ಎಂದರು.

ದೇಶದಲ್ಲಿ 1.55 ಲಕ್ಷ ಅಂಚೆ ಕಚೇರಿ ಇರುವ ದೊಡ್ಡ ಇಲಾಖೆ ಇದಾಗಿದ್ದು, ಇದನ್ನು ಬಳಸಿಕೊಂಡು ಆದಾಯ ಗಳಿಸುವ ಬಗ್ಗೆ ಸರಕಾರ ಯೋಚುನೆ ಮಾಡಬೇಕು. ಈ ಕಾಲದಲ್ಲೂ ಅತ್ಯಂತ ಕಡಿಮೆ ದರದಲ್ಲಿ ಸೇವೆ ನೀಡುವಾಗ ಆದಾಯ ಬರಲು ಹೇಗೆ ಸಾಧ್ಯ. ಆದುದರಿಂದ ಇಲಾಖೆಯ ಅಕೌಂಟಿಂಗ್ ವ್ಯವಸ್ಥೆ ಬದಲಾವಣೆ ಮಾಡಬೇಕು. ಇಲಾಖೆಯನ್ನು ಖಾಸಗೀರಣ ಮಾಡಿದರೆ ಸರಕಾರದಿಂದ ಸಿಗುತ್ತಿದ್ದ ಸೇವೆ ಖಾಸಗಿಯಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಧರಣಿಯಲ್ಲಿ ಸಮಿತಿಯ ಸಂಚಾಲಕ ಸುಹಾಸ್, ಸಹಸಂಚಾಲಕ ಸುರೇಶ್ ಕೆ., ಮುಖಂಡರಾದ ವಿಜಯ ನಾರಿ, ರತ್ನಾಕರ್ ನಾರಿ ವಂಡಾರು, ಸಿ.ಕೆ. ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.

ಗಮನ ಸೆಳೆದ ‘ಗೋಮುಖವ್ಯಾಘ್ರ’!

ಅಂಚೆ ಇಲಾಖೆಗೆ ತಟ್ಟಿರುವ ಖಾಸಗೀಕರಣದ ಭೂತದ ವಿರುದ್ಧ ಉಡುಪಿ ಅಂಚೆ ಕಚೇರಿಯ ಪೋಸ್ಟ್‌ಮೆನ್ ರಾಘವೇಂದ್ರ ಪ್ರಭು, ಗೋಮುಖವ್ಯಾಘ್ರ ವೇಷ ಧರಿಸಿ ಧರಣಿಯಲ್ಲಿ ಎಲ್ಲರ ಗಮನ ಸೆಳೆದರು.

‘ಇಂದು ಸರಕಾರಿ ಇಲಾಖೆಯನ್ನು ಖಾಸಗಿ ಸಂಸ್ಥೆಗಳು ಆಕ್ರಮಣ ಮಾಡು ತ್ತಿದೆ. ಗೋವಿನ ಮುಖವಾಡ ಹಾಕಿಕೊಂಡು ಬರುವ ಈ ಖಾಸಗಿ ಸಂಸ್ಥೆಗಳು ನಿಜವಾಗಿ ಹುಲಿಯಾಗಿರುತ್ತದೆ. ಇವರು ಎಂದಿಗೂ ಸಾಮಾನ್ಯ ನಾಗರಿಕರ, ನೌಕರರ ಹಾಗೂ ಗ್ರಾಹಕರ ಪರವಾಗಿ ಇರುವುದಿಲ್ಲ. ಅವರಿಗೆ ಲಾಭ ಮಾತ್ರ ಮುಖ್ಯವಾಗಿರುತ್ತದೆ. ಆದುದರಿಂದ ಈ ಖಾಸಗೀಕರಣ ನಮಗೆ ಬೇಡ ಸಂದೇಶ ಸಾರಲು ಈ ವೇಷ ಹಾಕಿದ್ದೇನೆ’ ಎಂದು ರಾಘವೇಂದ್ರ ಪ್ರಭು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News